ಬಳ್ಳಾರಿಯಲ್ಲಿ ಜನಾರ್ದನರೆಡ್ಡಿ ನಿವಾಸದ ಮೇಲೆ ಸಿಸಿಬಿ ದಾಳಿ

7

ಬಳ್ಳಾರಿಯಲ್ಲಿ ಜನಾರ್ದನರೆಡ್ಡಿ ನಿವಾಸದ ಮೇಲೆ ಸಿಸಿಬಿ ದಾಳಿ

Published:
Updated:

ಬಳ್ಳಾರಿ: ಇಡಿ ಪ್ರಕರಣ ಮುಚ್ಚುವ ಡೀಲ್ ಪ್ರಕರಣಕ್ಕೆ ಸಂಬಂಧ ಜನಾರ್ದನರೆಡ್ಡಿಯ ಬಳ್ಳಾರಿ ನಿವಾಸದ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿ ಮಂಜುನಾಥ ಚೌಧರಿ ನೇತೃತ್ವದ ತಂಡ ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ.

ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ಮಂಜುನಾಥ ಚೌದರಿ ನೇತೃತ್ವದ ಹತ್ತುಮಂದಿ ಅಧಿಕಾರಿಗಳ ತಂಡವು ನಗರದ ಹವಂಬಾವಿಯ ರೆಡ್ಡಿಯ ನಿವಾಸದ ಮೇಲೆ ದಾಳಿ ನಡೆಸಿದ್ದು, ರೆಡ್ಡಿ ಮಾವ ಪರಮೇಶ್ವರ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆಪ್ತ ಸ್ನೇಹಿತ ರೆಡ್ಡಿ ನೆರವಿಗೆ ಧಾವಿಸಿದ ಶಾಸಕ ಶ್ರೀರಾಮುಲು: ಬೆಂಗಳೂರಿನಿಂದ ಆಗಮಿಸಿರುವ ಸಿಸಿಬಿ ಪೊಲೀಸರ ದಾಳಿ ವಿಷಯ ತಿಳಿದ ಕೂಡಲೇ ರೆಡ್ಡಿ ನಿವಾಸಕ್ಕೆ ಶ್ರೀರಾಮುಲು ಆಗಮಿಸಿದರು.

ಶ್ರೀರಾಮುಲು ಬ್ಲಾಕ್ ಸ್ಕಾರ್ಪಿಯೋ ವಾಹನದಲ್ಲಿ ಬಂದಿಳಿದರು. ರೆಡ್ಡಿ ಮನೆಗೆ ಬ್ಲಾಕ್ ಸ್ಕಾರ್ಪಿಯೋ ಎಂಟ್ರಿ ಕೊಡುತ್ತಿದ್ದಂತೆ ಸೆಕ್ಯುರಿಟಿಗಳು ಸೆಲ್ಯೂಟ್ ಮಾಡಿದರು.

ಶೋಧ ಕಾರ್ಯಕ್ಕೆ‌ ಬಳ್ಳಾರಿಯ ಕೌಲ್ ಬಜಾರ್ ಸಿಪಿಐ ಉಮಾಪತಿ ಹಾಗೂ ಸಿಬ್ಬಂದಿ ಸಹಕಾರ‌ ನೀಡುತ್ತಿದ್ದಾರೆ.

ಜನಾರ್ದನ ರೆಡ್ಡಿ‌ ಆಪ್ತ ಶಾಸಕ‌ ಶ್ರೀರಾಮುಲು, ಆಂಧ್ರದ ಮಾಜಿಶಾಸಕ ಕಾಪು ರಾಮಚಂದ್ರ ರೆಡ್ಡಿ ಅವರು ಮನೆಯಲ್ಲಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಆರಂಭಗೊಂಡ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ: ರೆಡ್ಡಿಗೆ ಖೆಡ್ಡಾ ತೋಡಿದ ಸಿಸಿಬಿ!

 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !