ಸ್ವಾಭಿಮಾನದ ಬದುಕು: ಕೂಡೂರು

7
ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಸ್ವಾಭಿಮಾನದ ಬದುಕು: ಕೂಡೂರು

Published:
Updated:
ವಿಟ್ಲದಲ್ಲಿ ಭಾನುವಾರ ವಿಠಲ ಪದವಿಪೂರ್ವ ಕಾಲೇಜು ಸಂಚಾಲಕ ಎಲ್. ಎನ್. ಕೂಡೂರು ಅವರು ವಿಟ್ಲ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು. (ವಿಟ್ಲ ಚಿತ್ರ)

ವಿಟ್ಲ: ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾರ್ಗದರ್ಶನದಿಂದ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸ್ವಾಭಿಮಾನದ ಬದುಕು ಕಟ್ಟಿ ಕೊಳ್ಳಲು  ಸಾಧ್ಯವಾಗಿದೆ ಎಂದು ವಿಠಲ ಪದವಿಪೂರ್ವ ಕಾಲೇಜು ಸಂಚಾಲಕ ಎಲ್. ಎನ್. ಕೂಡೂರು ಹೇಳಿದರು.

ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು  ವಿಟ್ಲ ವಲಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ಎಂ ವಿಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಎ ಒಕ್ಕೂಟದ ಸೇವಾ ಪ್ರತಿನಿಧಿ ಕೌಶಿತಾ ಪದಾಧಿಕಾರಿಗಳ ಪರಿಚಯ ಮಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ವಿಟ್ಲ ಎ– ಒಕ್ಕೂಟದ ಚಂದ್ರಶೇಖರ, ಒಕ್ಕೆತ್ತೂರು ಒಕ್ಕೂಟದ ಸೋಮಪ್ಪ, ಮಾಮೇಶ್ವರ ಒಕ್ಕೂಟದ ನಾರಾಯಣ ಗೌಡ, ವಿಟ್ಲ ಬಿ–ಒಕ್ಕೂಟದ ಅಕ್ಬರ್ ಖಾನ್, ಉಕ್ಕುಡ ಒಕ್ಕೂಟದ ಉದಯಕುಮಾರ್, ಅಳಿಕೆ ಒಕ್ಕೂಟದ ನರಸಿಂಹ ಬಲ್ಲಾಳ್, ಮುಳಿಯ ಒಕ್ಕೂಟದ ಶೀನಪ್ಪ, ವಿಟ್ಲಮುಡ್ನೂರು ಒಕ್ಕೂಟದ ಗಣೇಶ್, ಆಲಂಗಾರು ಒಕ್ಕೂಟದ ಶೀನಪ್ಪ ನಾಯ್ಕ, ಅಳಕೆಮಜಲು ಒಕ್ಕೂಟದ ಸುಂದರ ಗೌಡ, ಒಡ್ಕಿದು ಒಕ್ಕೂಟದ ಜನಾರ್ದನ ಕುಲಾಲ್, ಕುಳ ಒಕ್ಕೂಟದ ದಾಮೋದರ ಪೂಜಾರಿ ಇದ್ದರು.

ಬಂಟ್ವಾಳ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ., ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ವಿಟ್ಲ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ, ಬೊಳಂತಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಠಲ ನಾಯಕ್, ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷ ಸದಾನಂದ ಗೌಡ ನಾವೂರು, ವಿಟ್ಲ ವಲಯ ಅಧ್ಯಕ್ಷ ನರಸಿಂಹ ಬಳ್ಳಾಲ್ ಉಪಸ್ಥಿತರಿದ್ದರು.

ಸುಮಿತ್ರಾ ಉಕ್ಕುಡ ಪ್ರಾರ್ಥಿಸಿದರು. ಮಾಮೇಶ್ವರ ಒಕ್ಕೂಟದ ಅಧ್ಯಕ್ಷ ಹರೀಶ್ ಎಸ್ ಪಿ ಸ್ವಾಗತಿಸಿದರು. ಅಳಿಕೆಮಜಲು ಒಕ್ಕೂಟದ ಸೇವಾಪ್ರತಿನಿಧಿ ಸುಗಂಧಿನಿ ಸಾಧನಾ ವರದಿ ವಾಚಿಸಿದರು. ವಿಟ್ಲಮುಡ್ನೂರು ಒಕ್ಕೂಟದ ಹರೀಶ್ ಪೂಜಾರಿ ವಂದಿಸಿದರು. ಮೇಲ್ವಿಚಾರಕಿ ಪ್ರೇಮ, ಸೇವಾ ಪ್ರತಿನಿಧಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !