ಶಿರಾಡಿ ಘಾಟ್‌ ರಸ್ತೆ ಸಂಚಾರ ಮತ್ತೆ ಶುರು

7
ಒಂದು ವಾರ ಪ್ರಾಯೋಗಿಕ ಸಂಚಾರಕ್ಕೆ ಅನುಮತಿ

ಶಿರಾಡಿ ಘಾಟ್‌ ರಸ್ತೆ ಸಂಚಾರ ಮತ್ತೆ ಶುರು

Published:
Updated:
Deccan Herald

ಹಾಸನ: ಭೂಕುಸಿತದಿಂದ ಬಂದ್ ಆಗಿದ್ದ ಹಾಸನ–ಮಂಗಳೂರು ನಡುವಿನ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಒಂದು ವಾರ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸತತ ಮಳೆಯಿಂದ ಹಲವು ಕಡೆ ಭೂಕುಸಿತ, ಗುಡ್ಡ ಕುಸಿದು ಹಾಳಾಗಿದ್ದ ರಸ್ತೆಗಳ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ದ್ವಿಚಕ್ರ ವಾಹನಗಳು, ಕಾರು, ಟೆಂಪೊ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಉಳಿದ ಮಾದರಿಯ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರಿಗೆ ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ದೋಣಿಗಾಲ್‌ ಚೆಕ್‌ಪೋಸ್ಟ್‌ನಿಂದ ದೊಡ್ಡತಪ್ಪಲೆ ಗ್ರಾಮದವರೆಗೆ ಸುರಕ್ಷತೆ ದೃಷ್ಟಿಯಿಂದ ಎರಡು ಮಾರ್ಗಗಳನ್ನು ಏಕಮುಖ ಸಂಚಾರವನ್ನಾಗಿ ಪರಿವರ್ತಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ.

ಬೆಳಿಗ್ಗೆ ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮತ್ತು ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಂಟಿಯಾಗಿ ಭೂಕುಸಿತ ಸ್ಥಳಗಳ ಪರಿಶೀಲನೆ ನಡೆಸಿದ್ದರು.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದಂತೆ ಸಕಲೇಶಪುರ ಬಳಿ ಬೆಳಿಗ್ಗೆ ಕೆಲಕಾಲ ಲಘು ವಾಹನಗಳ ಸಂಚಾರಕ್ಕೆ ತೆರೆದು, ಮತ್ತೆ ಬಂದ್ ಮಾಡಿದ ಘಟನೆಯೂ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್ ವಾಹನ ಸಂಚಾರ ನಿಷೇಧ ಆದೇಶ ವಾಪಸ್ ಪಡೆಯದ ಕಾರಣ ಗುಂಡ್ಯ ಬಳಿ ಗೇಟ್ ತೆರೆದಿರಲಿಲ್ಲ.

ಇದರಿಂದಾಗಿ ಹಾಸನ ಮಾರ್ಗವಾಗಿ ಬಂದಿದ್ದ 50ಕ್ಕೂ ಹೆಚ್ಚು ವಾಹನಗಳು ಕೆಲ ಗಂಟೆ ಘಾಟಿಯಲ್ಲೇ ನಿಂತಿದ್ದವು. ಸಂಜೆ ಆದೇಶ ಹೊರಬಿದ್ದ ಬಳಿಕ ವಾಹನಗಳ ಸಂಚಾಕ್ಕೆ
ಮುಕ್ತಗೊಳಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !