ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಶೀಘ್ರವೇ ಮರುಪಾವತಿ ನಿರೀಕ್ಷೆ

ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ಚರ್ಚೆ
Last Updated 16 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆ ತ್ವರಿತಗೊಳಿಸುವ ಬಗ್ಗೆ ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ಮಾತುಕತೆ ನಡೆಸುತ್ತಿವೆ ಎಂದು ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾನಿರ್ದೇಶಕ ಎನ್‌.ಕೆ. ಶ್ರೀವಾಸ್ತವ್‌ ಹೇಳಿದ್ದಾರೆ.

ಜಿಎಸ್‌ಟಿಯಲ್ಲಿ ರಫ್ತುದಾರರಿಗೆ ₹ 14 ಸಾವಿರ ಕೋಟಿ ಮರುಪಾವತಿ ಬಾಕಿ ಉಳಿದಿದೆ.

ಇಲ್ಲಿ ನಡೆದ ವಾಣಿಜ್ಯೋದ್ಯಮ ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸರಿಯಾಗಿ ಲೆಕ್ಕಪತ್ರ ಮಾಹಿತಿ ನೀಡದೇ ಇರುವುದು ಸಹ ಮರುಪಾವತಿ ವಿಳಂಬಕ್ಕೆ ಕಾರಣ’ ಎಂದು ಅವರು ರಫ್ತುದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಗಮನ: ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ದಿಷ್ಟ ವಲಯದ ಬಗ್ಗೆ ಗಮನ ನೀಡಲು ಆರಂಭಿಸಿದೆ.

ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿದ್ದು, ವಲಯವಾರು ರಫ್ತು ಸಾಮರ್ಥ್ಯದ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀವಾಸ್ತವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT