ಸುಳ್ವಾಡಿ ದುರಂತ: ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಬೇಕು- ಪುಷ್ಪಾ ಅಮರನಾಥ್ ಹೇಳಿಕೆ

7

ಸುಳ್ವಾಡಿ ದುರಂತ: ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಬೇಕು- ಪುಷ್ಪಾ ಅಮರನಾಥ್ ಹೇಳಿಕೆ

Published:
Updated:
Prajavani

ಕೊಳ್ಳೇಗಾಲ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷಪ್ರಸಾದ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂತಹ ನೀಚ ಕೃತ್ಯ ಕೆಲಸವನ್ನು ಮಾಡಿರುವ ಅವಿವೇಕಿಗಳಿಗೆ ನ್ಯಾಯಾಲಯದಲ್ಲಿ ಮಹತ್ವರವಾದ ತೀರ್ಪೂ ಸಿಕ್ಕೇ ಸಿಕುವುದು. ಈ ಆರೋಪಿಗಳ ಪರ ರಾಜ್ಯದಲ್ಲಿ ಯಾವ ವಕೀಲರು ಸಹ ವಕಾಲತ್ತು ನಡೆಸ ಬೇಡಿ. ಆಗ ಇವರಿಗೆ ಆಕೃತ್ಯದ ಬಗ್ಗೆ ಅರಿವು ಆಗುತ್ತದೆ’ ಎಂದರು.

ಇಂತಹ ಬಡ ಕುಟುಂಬದವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ಕಾರದ ವತಿಯಿಂದ ಆರ್ಥಿಕವಾಗಿ ಹಣದ ಸಹಾಯ ಮತ್ತು ಸತ್ತವರ ಕುಟುಂಬದವರಿಗೆ 2 ಎಕರೆ ಜಾಗ ಹಾಗೂ ಮನೆಯ ಒಬ್ಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ಮಹಿಳಾ ಘಟಕದ ವತಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇವೆ. ವಿಷ ಪ್ರಸಾದ ಸೇವಿಸಿ ಸಾವನ್ನಪಿರುವ ಗ್ರಾಮಗಳಿಗೆ ಭೇಟಿ ನೀಡಿ ಅವರ ಕಟುಂಬದವರ ಸ್ಥಿತಿಗತಿಯನ್ನು ಗಮನಿಸುತ್ತೇವೆ ಎಂದರು.

ನಮ್ಮ ಸಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ಇರುತ್ತದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.

ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಲತಾ ಜಯಣ್ಣ, ಟೌನ್ ಅಧ್ಯಕ್ಷೆ ದೇವಿಕಾ, ನಗರಸಭೆ ಸದಸ್ಯೆ ಪುಷ್ಪಲತಾ ಶಾಂತರಾಜು, ರೇಣುಕಾ, ಇಂದುಮತಿ, ವಸಂತಮ್ಮ, ಮುಖಂಡ ಶಾಂತರಾಜು ಇದ್ದರು.

*
ಬಿಜೆಪಿಯವರ ಸುಳ್ಳ ಮಾತಿಗೆ ಯಾರೂ ಕಿವಿಕೂಡಬೇಡಿರಿ. ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ನಾವು ಯಾರು ಅಂತ ತೋರಿಸುತ್ತೇವೆ. 
-ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !