ಪರದೇಶಿಮಠದ ರೇಣುಕ ಸ್ವಾಮೀಜಿ ನಿಧನ; ಭಕ್ತರ ಕಂಬನಿ

7

ಪರದೇಶಿಮಠದ ರೇಣುಕ ಸ್ವಾಮೀಜಿ ನಿಧನ; ಭಕ್ತರ ಕಂಬನಿ

Published:
Updated:
Prajavani

ದೇವರಹಿಪ್ಪರಗಿ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಪರದೇಶಿಮಠದ ರೇಣುಕ ಸ್ವಾಮೀಜಿ (51) ಶುಕ್ರವಾರ ನಸುಕಿನಜಾವ ಹೃದಯಾಘಾತದಿಂದ ಲಿಂಗೈಕ್ಯರಾದರು.

ಅಸಂಖ್ಯಾತ ಭಕ್ತರನ್ನು ಹೊಂದಿದ್ದ ಸ್ವಾಮೀಜಿಯವರ ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ. ಪೂರ್ವಾಶ್ರಮದ ತಾಯಿ, ಇಬ್ಬರು ಸಹೋದರರು ಸೇರಿದಂತೆ ಅಪಾರ ಭಕ್ತವೃಂದ ಸ್ವಾಮೀಜಿಗಿದೆ.

ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ, ಎಮ್ಮಿಗನೂರ ಹಂಪಿಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯ, ವೀರಗಂಗಾಧರ ಶಿವಾಚಾರ್ಯ, ಜಡಿಸಿದ್ಧೇಶ್ವರ ಶಿವಾಚಾರ್ಯ, ನಡುವಿನಮಠದ ವೀರಮಹಾಂತ ಶಿವಾಚಾರ್ಯ, ಚಿಮ್ಮಲಗಿ ನೀಲಕಂಠ ಶಿವಾಚಾರ್ಯ ಮಠಕ್ಕೆ ಭೇಟಿ ನೀಡಿ, ಅಂತ್ಯಕ್ರಿಯೆಯ ನೇತೃತ್ವ ವಹಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !