ಪ್ರತ್ಯೇಕ ಘಟನೆ: ಈಜಲು ತೆರಳಿದಮೂವರು ವಿದ್ಯಾರ್ಥಿಗಳು ಸಾವು

ಶುಕ್ರವಾರ, ಜೂನ್ 21, 2019
24 °C

ಪ್ರತ್ಯೇಕ ಘಟನೆ: ಈಜಲು ತೆರಳಿದಮೂವರು ವಿದ್ಯಾರ್ಥಿಗಳು ಸಾವು

Published:
Updated:

ಬೆಂಗಳೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ, ಕೆರೆಗಳಿಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.

ಎಲೆಕ್ಟ್ರಾನಿಕ್‌ ಸಿಟಿಯ ಬಿಂಗೀಪುರ ಕೆರೆಗೆ ಭಾನುವಾರ ಸಂಜೆ ಈಜಲು ತೆರಳಿದ ಸ್ಥಳೀಯ ನಿವಾಸಿಗಳಾದ ಶಾಹಿದ್‌ ಖಾನ್‌ (17) ಮತ್ತು ಜಾಕೀರ್‌ ಖಾನ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದರೂ ಶವ ಪತ್ತೆಯಾಗಿರಲಿಲ್ಲ. ನುರಿತ ಈಜುಗಾರರ ನೆರವಿನಿಂದ ಸೋಮವಾರ ಬೆಳಿಗ್ಗೆ ಶವಗಳನ್ನು ಮೇಲಕ್ಕೆ‌ತ್ತಲಾಯಿತು.

ಆನೇಕಲ್‌ ಬಳಿಯ ಮರಸೂರು ಗ್ರಾಮದಲ್ಲಿ ಕೆರೆಗೆ ಈಜಲು ಹೋಗಿದ್ದ ರೋಷನ್‌ (14) ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ತೆರಳಿದ ಸೂರ್ಯ ಸಿಟಿ ಪೊಲೀಸರು, ಈಜುಗಾರರ ನೆರವಿನಿಂದ ಮೃತದೇಹವನ್ನು ಮೇಲಕ್ಕೆ ಎತ್ತಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !