ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kings XI Punjab

ADVERTISEMENT

IPL 2024: ಪಂಜಾಬ್‌ಗೆ 193 ರನ್ ಗುರಿ ನೀಡಿದ ಮುಂಬೈ

ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿದೆ.
Last Updated 18 ಏಪ್ರಿಲ್ 2024, 14:14 IST
IPL 2024: ಪಂಜಾಬ್‌ಗೆ 193 ರನ್ ಗುರಿ ನೀಡಿದ ಮುಂಬೈ

IPL-2020 | KXIP vs CSK: ಜಯದೊಂದಿಗೆ ಪಂಜಾಬ್‌ ದಿಕ್ಕೆಡಿಸಿದ ಚೆನ್ನೈ

ಋತುರಾಜ್ ಗಾಯಕವಾಡ್ ಅಮೋಘ ಅರ್ಧಶತಕ; ದೀಪಕ್ ಹೂಡಾ ಹೋರಾಟ ವ್ಯರ್ಥ: ಲುಂಗಿ ಗಿಡಿಗೆ ಮೂರು ವಿಕೆಟ್
Last Updated 1 ನವೆಂಬರ್ 2020, 16:33 IST
IPL-2020 | KXIP vs CSK: ಜಯದೊಂದಿಗೆ ಪಂಜಾಬ್‌ ದಿಕ್ಕೆಡಿಸಿದ ಚೆನ್ನೈ

IPL-2020 | KXIP vs RR: ಸಹಸ್ರ ಸಿಕ್ಸರ್‌ ಸರದಾರ 'ಕ್ರಿಸ್ ಗೇಲ್'

ಶತಕ ತಪ್ಪಿಸಿಕೊಂಡ ಗೇಲ್: ಕಿಂಗ್ಸ್ ಇಲೆವನ್ ಪಂಜಾಬ್ ಹೋರಾಟದ ಮೊತ್ತ
Last Updated 31 ಅಕ್ಟೋಬರ್ 2020, 3:57 IST
IPL-2020 | KXIP vs RR: ಸಹಸ್ರ ಸಿಕ್ಸರ್‌ ಸರದಾರ 'ಕ್ರಿಸ್ ಗೇಲ್'

IPL-2020 | KXIP vs RR: ಅಬ್ಬರಿಸಿದ ರಾಜಸ್ಥಾನ ರಾಯಲ್ಸ್‌ಗೆ ಏಳು ವಿಕೆಟ್‌ಗಳ ಜಯ

ಇಲ್ಲಿನ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಕಿಂಗ್‌ ಇಲೆವನ್‌ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು.
Last Updated 30 ಅಕ್ಟೋಬರ್ 2020, 20:03 IST
IPL-2020 | KXIP vs RR: ಅಬ್ಬರಿಸಿದ ರಾಜಸ್ಥಾನ ರಾಯಲ್ಸ್‌ಗೆ ಏಳು ವಿಕೆಟ್‌ಗಳ ಜಯ

‘ಕ್ರಿಕೆಟ್‌ಗೆ ವಿದಾಯ ಹೇಳದಿರಿ’: 41 ವರ್ಷದ ಗೇಲ್‌ಗೆ ಕಿಂಗ್ಸ್ ಯುವ ಆಟಗಾರರ ಮನವಿ

ತಮ್ಮ ಸ್ಫೋಟಕ ಆಟದ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಅವರಿಗೆ, ನೀವು ಕ್ರಿಕೆಟ್‌ನಿಂದ ನಿವೃತ್ತಿ ಹೊಂದದಿರಿ ಎಂದು ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಯುವ ಆಟಗಾರರು ಮನವಿ ಮಾಡಿದ್ದಾರೆ.
Last Updated 27 ಅಕ್ಟೋಬರ್ 2020, 12:49 IST
‘ಕ್ರಿಕೆಟ್‌ಗೆ ವಿದಾಯ ಹೇಳದಿರಿ’: 41 ವರ್ಷದ ಗೇಲ್‌ಗೆ ಕಿಂಗ್ಸ್ ಯುವ ಆಟಗಾರರ ಮನವಿ

ಗೇಲ್ ಅವರನ್ನು ತಂಡದಿಂದ ಹೊರಗಿಟ್ಟದ್ದು ಕಠಿಣ ನಿರ್ಧಾರವಾಗಿತ್ತು: ರಾಹುಲ್

ಶಾರ್ಜಾ: ಐಪಿಎಲ್‌–2020 ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಅವರಿಗೆ ಅವಕಾಶ ನೀಡದೇಹೋದದ್ದು ಕಠಿಣವಾದ ನಿರ್ಧಾರವಾಗಿತ್ತು ಎಂದು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಹೇಳಿದ್ದಾರೆ. ಕಿಂಗ್ಸ್‌ ತಂಡ ಟೂರ್ನಿಯ ಲೀಗ್‌ ಹಂತದಲ್ಲಿ ಆಡಿದ ಮೊದಲ ಏಳು ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿ ಆರು ಸೋಲುಗಳನ್ನು ಕಂಡಿತ್ತು. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಕಾಣಿಸಿಕೊಂಡ ನಂತರ ಆಡಿದ ಸತತ ಐದು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಕಿಂಗ್ಸ್‌ ಹಾಗೂ ಕೆಕೆಆರ್‌ ತಂಡಗಳು ಸೋಮವಾರ ಸೆಣಸಾಟ ನಡೆಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 149 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಕಿಂಗ್ಸ್‌ ಪರ ಮನದೀಪ್‌ ಸಿಂಗ್ ಮತ್ತು ಗೇಲ್ ಉತ್ತಮ ಬ್ಯಾಟಿಂಗ್‌ ನಡೆಸಿದ್ದರು. ಮನದೀಪ್‌ 56 ಎಸೆತಗಳಲ್ಲಿ 66 ರನ್‌ ಗಳಿಸಿದರೆ, ಗೇಲ್‌ ಕೇವಲ 21 ಎಸೆತಗಳಲ್ಲಿ 51 ರನ್ ಬಾರಿಸಿ ನೆರವಾಗಿದ್ದರು. ಹೀಗಾಗಿ ಕಿಂಗ್ಸ್‌ ತಂಡ ನಿರಾಯಾಸವಾಗಿ ಗೆಲುವು ಸಾಧಿಸಿತ್ತು. ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ಆರು ಜಯ ಸಾಧಿಸಿ 12 ಪಾಯಿಂಟ್ಸ್‌ ಗಳಿಸಿಕೊಂಡಿರುವ ಈ ತಂಡ, ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
Last Updated 27 ಅಕ್ಟೋಬರ್ 2020, 10:37 IST
ಗೇಲ್ ಅವರನ್ನು ತಂಡದಿಂದ ಹೊರಗಿಟ್ಟದ್ದು ಕಠಿಣ ನಿರ್ಧಾರವಾಗಿತ್ತು: ರಾಹುಲ್

IPL-2020 | KKR vs KXIP: ಮನದೀಪ್-ಗೇಲ್ ಜೊತೆಯಾಟ; ಕಿಂಗ್ಸ್‌ಗೆ ಸತತ ಐದನೇ ಜಯ

ಶಾರ್ಜಾ: ಮೂರು ದಿನಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡರೂ ತಂಡದೊಂದಿಗೆ ಉಳಿಯಲು ನಿರ್ಧರಿಸಿದ ಮನದೀಪ್ ಸಿಂಗ್ ಮನಮೋಹಕ ಹೊಡೆತಗಳ ಮೂಲಕ ಬೆಳಗಿದದರು. ಕ್ರಿಸ್ ಗೇಲ್ ಜೊತೆ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಅವರು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಎಂಟು ವಿಕೆಟ್‌ಗಳ ಜಯ ಗಳಿಸಿಕೊಟ್ಟರು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ನೀಡಿದ 150 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ಏಳು ಎಸೆತಗಳು ಉಳಿದಿರುವಾಗಲೇ ಎರಡು ವಿಕೆಟ್ ಕಳೆದುಕೊಂಡು ದಡ ಸೇರಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಇದು ತಂಡದ ಸತತ ಐದನೇ ಜಯವಾಗಿದೆ. ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವಾಡಿದ ನಾಯಕ ಕೆ.ಎಲ್.ರಾಹುಲ್ ಯುವ ಬೌಲರ್ ವರುಣ್ ಚಕ್ರವರ್ತಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಮನದೀಪ್ (66; 56 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತು ಗೇಲ್ (51; 29 ಎ, 2 ಬೌಂ, 5 ಸಿ) ಆಟ ರಂಗೇರಿತು. ಗೆಲುವಿಗೆ ಮೂರು ರನ್‌ಗಳು ಬೇಕಾಗಿದ್ದಾಗ ಗೇಲ್ ಔಟಾದರು. ಆದರೆ ಮನದೀಪ್ ಸಿಂಗ್ ಅಜೇಯರಾಗಿ ಉಳಿದರು.
Last Updated 26 ಅಕ್ಟೋಬರ್ 2020, 18:36 IST
IPL-2020 | KKR vs KXIP: ಮನದೀಪ್-ಗೇಲ್ ಜೊತೆಯಾಟ; ಕಿಂಗ್ಸ್‌ಗೆ ಸತತ ಐದನೇ ಜಯ
ADVERTISEMENT

ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅಪಾರ; ರಾಣಾ–ಸಿಂಗ್ ಆಟಕ್ಕೆ ಸಚಿನ್ ಮೆಚ್ಚುಗೆ

ಐಪಿಎಲ್‌ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ಆಟಗಾರ ಮನ್‌ದೀಪ್‌ ಸಿಂಗ್‌ ಮತ್ತು ಕೋಲ್ಕತ ನೈಟ್‌ರೈಡರ್ಸ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ರಾಣಾ ಅವರ ಮಾವ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ನಿಧನರಾಗಿದ್ದರು. ಮನ್‌ದೀಪ್‌ ಸಿಂಗ್ ತಂದೆಯವರೂ ಅದೇ ದಿನ ಮೃತಪಟ್ಟಿದ್ದರು. ಆದಾಗ್ಯೂ ರಾಣಾ ಮತ್ತು ಮನ್‌ದೀಪ್‌ ತಮ್ಮ ತಂಡಗಳ ಪರ ಕಣಕ್ಕಿಳಿದಿದ್ದರು. ಈ ಬಗ್ಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ನೋವಾಗುತ್ತದೆ. ಆದರೆ, ಅಂತಿಮ ವಿದಾಯ ಹೇಳಲೂ ಸಾಧ್ಯವಾಗದಿರುವುದು ಹೃದಯವಿದ್ರಾವಕ. ಈ ದುರಂತದ ನೋವಿನಿಂದ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆಟಕ್ಕೆ ಇಂದು ಮರಳಿರುವುದಕ್ಕೆ ಹ್ಯಾಟ್ಸ್‌ಆಫ್‌. ಚೆನ್ನಾಗಿ ಆಡಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದಾರೆ.
Last Updated 25 ಅಕ್ಟೋಬರ್ 2020, 12:21 IST
ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅಪಾರ; ರಾಣಾ–ಸಿಂಗ್ ಆಟಕ್ಕೆ ಸಚಿನ್ ಮೆಚ್ಚುಗೆ

IPL-2020: ಕೊನೆಯ 4 ಓವರ್‌ಗಳಲ್ಲಿ 7 ವಿಕೆಟ್ ಪಡೆದ ಕಿಂಗ್ಸ್‌ಗೆ ರೋಚಕ ಜಯ

ದುಬೈ: ಕೊನೆಯ ನಾಲ್ಕು ಓವರ್‌ಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ 7 ವಿಕೆಟ್‌ಗಳನ್ನು ಉರುಳಿಸಿದ ಕಿಂಗ್ಸ್ ಇಲವೆನ್‌ ಪಂಜಾಬ್ 12 ರನ್ ಅಂತರದ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್‌ ಪಡೆನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 126 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ರೈಸರ್ಸ್‌ಗೆ ನಾಯಕ ಡೇವಿಡ್ ವಾರ್ನರ್‌ (35) ಮತ್ತು ಜಾನಿ ಬೈರ್ಸ್ಟ್ರೋವ್‌ (19) ಮೊದಲ ವಿಕೆಟ್‌ ಜೊತೆಯಾಟದಲ್ಲಿ 52 ರನ್‌ ಕಲೆಹಾಕಿದರು. ಸುಲಭ ಗುರಿ ಎದುರು ರೈಸರ್ಸ್‌ ತಂಡ 16ನೇ ಓವರ್‌ಗಳವರೆಗೂ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ರೈಸರ್ಸ್ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 99 ರನ್‌ ಗಳಿಸಿ ಆಡುತ್ತಿತ್ತು. ಆದರೆ, 17ನೇ ಓವರ್‌ನ ಮೊದಲ ಎಸೆತದಲ್ಲಿ ಮನೀಷ್‌ ಪಾಂಡೆ (15) ಔಟಾಗುತ್ತಿದ್ದಂತೆ ಪಂದ್ಯ ತಿರುವು ಪಡೆದುಕೊಂಡಿತು. ನಂತರದ ಓವರ್‌ನಲ್ಲಿ ವಿಜಯ್ ಶಂಕರ್ (26) ವಿಕೆಟ್‌ ಒಪ್ಪಿಸಿದರು. ಜೇಸನ್‌ ಹೋಲ್ಡರ್‌ ಮತ್ತು ಸಂದೀಪ್‌ ಶರ್ಮಾ 19ನೇ ಓವರ್‌ನಲ್ಲಿ ಔಟಾದರೆ, ರಶೀದ್ ಖಾನ್‌, ಪ್ರಿಯಂ ಗರ್ಗ್‌ ಮತ್ತು ಖಲೀಲ್‌ ಅಹಮದ್‌ ಕೊನೆಯ ಓವರ್‌ನಲ್ಲಿ ವಿಕೆಟ್‌ ಕೈ ಚೆಲ್ಲಿದರು. ಇದರೊಂದಿಗೆ 114 ರನ್‌ ಗಳಿಸಿದ ರೈಸರ್ಸ್‌ ಇನಿಂಗ್ಸ್‌ಗೆ 19.5ನೇ ಓವರ್‌ನಲ್ಲಿ ತೆರೆ ಬಿದ್ದಿತು.
Last Updated 24 ಅಕ್ಟೋಬರ್ 2020, 22:46 IST
IPL-2020: ಕೊನೆಯ 4 ಓವರ್‌ಗಳಲ್ಲಿ 7 ವಿಕೆಟ್ ಪಡೆದ ಕಿಂಗ್ಸ್‌ಗೆ ರೋಚಕ ಜಯ

IPL-2020: ಕಿಂಗ್ಸ್ ಛಲಕ್ಕೆ ದಕ್ಕಿದ ಫಲ

ರಾಹುಲ್ ಬಳಗದ ಬೌಲರ್‌ಗಳ ದಾಳಿಗೆ ಕುಸಿದ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು; ಪಂದ್ಯಕ್ಕೆ ತಿರುವು ನೀಡಿದ ಸುಚಿತ್ ಕ್ಯಾಚ್
Last Updated 24 ಅಕ್ಟೋಬರ್ 2020, 19:44 IST
IPL-2020: ಕಿಂಗ್ಸ್ ಛಲಕ್ಕೆ ದಕ್ಕಿದ ಫಲ
ADVERTISEMENT
ADVERTISEMENT
ADVERTISEMENT