ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

online bank fraud

ADVERTISEMENT

ಓಲಾ ಬೈಕ್ ಖರೀದಿ: ₹76,960 ಕಳೆದುಕೊಂಡ ಗ್ರಾಹಕ

ಬೆಂಗಳೂರು: ಆನ್‌ಲೈನ್ ಮೂಲಕ ಓಲಾ ಬೈಕ್ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿ ಅಬ್ದುಲ್ ಎಂಬುವರು ₹76,960 ಕಳೆದುಕೊಂಡಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ತಲಘಟ್ಟಪುರ ನಿವಾಸಿ ಅಬ್ದುಲ್ ಅವರು ಇತ್ತೀಚೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಏಪ್ರಿಲ್ 14ರಂದು ಅಬ್ದುಲ್ ಅವರಿಗೆ ಕರೆ ಮಾಡಿದ್ದ ಆರೋಪಿ, ‘ಆನ್‌ಲೈನ್ ಮೂಲಕ ಕಡಿಮೆ ಬೆಲೆಗೆ ಓಲಾ ಬೈಕ್ ಮಾರುತ್ತಿದ್ದೇವೆ’ ಎಂದಿದ್ದ. ಮಾತು ನಂಬಿದ್ದ ದೂರುದಾರ, ಆತನ ಜೊತೆ ವ್ಯವಹಾರ ಮುಂದುವರಿಸಿದ್ದರು. ಆರೋಪಿಯು ಹಂತ ಹಂತವಾಗಿ ₹ 76,960 ‍ಪಡೆದಿದ್ದ. ಬಳಿಕ, ಬೈಕ್ ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 12 ಆಗಸ್ಟ್ 2022, 21:16 IST
ಓಲಾ ಬೈಕ್ ಖರೀದಿ: ₹76,960 ಕಳೆದುಕೊಂಡ ಗ್ರಾಹಕ

ಆನ್‌ಲೈನ್‌ನಲ್ಲಿ ₹1.69 ಲಕ್ಷ ವಂಚನೆ

ಮೊಬೈಲ್‌ನಲ್ಲಿ ಪೇ–ಟಿಎಂ ಆ್ಯಪ್‌ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೇಶ್ವಾಪುರದ ಮಹ್ಮದ್‌ ಶೇಖ್‌ ಅವರಿಗೆ ಕರೆ ಮಾಡಿ ನಂಬಿಸಿದ ವಂಚಕ, ಬ್ಯಾಂಕ್‌ ಮಾಹಿತಿ ಪಡೆದು ₹1.69 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ
Last Updated 20 ಮಾರ್ಚ್ 2022, 5:00 IST
fallback

ಆನ್‌ಲೈನ್‌ ಬ್ಯಾಂಕಿಂಗ್ ಖಾತೆ ತೆರೆದು ₹ 8.76 ಲಕ್ಷ ವಂಚನೆ

ಎಟಿಎಂ ಕಾರ್ಡ್ ನಿಷ್ಕ್ರಿಯವಾಗುವುದಾಗಿ ಹೇಳಿ ನಗರದ ವೃದ್ಧೆಯೊಬ್ಬರಿಂದ ಬ್ಯಾಂಕ್ ಖಾತೆ ವಿವರ ಪಡೆದಿದ್ದ ಸೈಬರ್ ಖದೀಮರು, ವೃದ್ಧೆ ಹೆಸರಿನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಖಾತೆ ತೆರೆದು ₹ 8.76 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ.
Last Updated 19 ಜುಲೈ 2021, 16:41 IST
fallback

ಎಚ್ಚರ ತಪ್ಪಿದರೆ ಬ್ಯಾಂಕ್‌ ಖಾತೆಗೆ ಕನ್ನ

ಎಟಿಎಂ ಪಿನ್‌, ಬ್ಯಾಂಕ್ ಖಾತೆ ವಿವರ ಬಹಿರಂಗ ಬೇಡ: ಎಸ್‌ಪಿ ಲಕ್ಷ್ಮಣ ನಿಂಬರಗಿ
Last Updated 22 ಡಿಸೆಂಬರ್ 2018, 10:30 IST
ಎಚ್ಚರ ತಪ್ಪಿದರೆ ಬ್ಯಾಂಕ್‌ ಖಾತೆಗೆ ಕನ್ನ
ADVERTISEMENT
ADVERTISEMENT
ADVERTISEMENT
ADVERTISEMENT