ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

photo story

ADVERTISEMENT

PHOTOS | ‘ಗಿರ್ಕಿ’ಯಲ್ಲಿ ಮೋಡಿ ಮಾಡಲು ಸಜ್ಜಾದ ದಿವ್ಯ ಉರುಡುಗ – ವಿಲೋಕ್ ರಾಜ್

ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿರುವ, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿರುವ ಚಿತ್ರ ‘ಗಿರ್ಕಿ’ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ ‘ಗಿರ್ಕಿ’ ಚಿತ್ರವನ್ನು ವೀರೇಶ್ ಪಿ.ಎಂ. ನಿರ್ದೇಶಿಸಿದ್ದಾರೆ‌. ಅವರಿಗೆ ಇದು ಮೊದಲ ಚಿತ್ರ.ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಕದಿಯಲೇನು...’ ಎಂಬ ಹಾಡನ್ನು ಬರೆದಿದ್ದಾರೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ.ಜುಲೈ 8ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್ ಪಿ.ಎಂ. ಹಾಡುಗಳನ್ನು ಬರೆದಿದ್ದಾರೆ. ‌
Last Updated 17 ಜೂನ್ 2022, 12:55 IST
PHOTOS | ‘ಗಿರ್ಕಿ’ಯಲ್ಲಿ ಮೋಡಿ ಮಾಡಲು ಸಜ್ಜಾದ ದಿವ್ಯ ಉರುಡುಗ – ವಿಲೋಕ್ ರಾಜ್
err

ಧಾರಾಕಾರ ಮಳೆ: ತೊಯ್ದ ಹಂಪಿ ರಥ ಬೀದಿಯಲ್ಲಿ ಆಕರ್ಷಿಸಿದ ಪ್ರತಿಬಿಂಬ

ಬುಧವಾರ ರಾತ್ರಿ ಸುರಿದ ಮಳೆಗೆ ಹೊಸಪೇಟೆ ತಾಲ್ಲೂಕಿನ ಹಂಪಿ ರಥಬೀದಿ, ಅಷ್ಟಭುಜ ಕೊಳ ಹಾಗೂ ಪಾನ್‌ ಸುಪಾರಿ ಬಜಾರ್‌ ಆವರಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಚಿತ್ರಗಳು: ರಾಚಯ್ಯ ಎಸ್‌. ಸ್ಥಾವರಿಮಠ.
Last Updated 3 ಜೂನ್ 2021, 9:09 IST
ಧಾರಾಕಾರ ಮಳೆ: ತೊಯ್ದ ಹಂಪಿ ರಥ ಬೀದಿಯಲ್ಲಿ ಆಕರ್ಷಿಸಿದ ಪ್ರತಿಬಿಂಬ
err

ಚಿತ್ರಾವಳಿ: ಸ್ವಿಮ್ ಸೂಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ

ಬ್ರೆಜಿಲ್ ದೇಶದ ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ ಇದೀಗ ಕ್ರೀಡಾ ಪತ್ರಿಕೆ ’ಸ್ಪೋರ್ಟ್ಸ್‌ ಇಲುಸ್ಟ್ರೇಟೆಡ್‌’ನ ‘ಸ್ವಿಮ್ ಸೂಟ್’ಸಂಚಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. 23 ವರ್ಷದ ಸಂಪಿಯೋ ಜುಲೈ 21ರ ಸಂಚಿಕೆಯಲ್ಲಿ ಮಾಡೆಲ್ ಆಗಿ ಆಯ್ಕೆಯಾಗಿದ್ದಾರೆ. ಈ ಮ್ಯಾಗ್‌ಜೀನ್‌ನ ಸ್ವಿಮ್ ಸೂಟ್ ಸಂಚಿಕೆಗೆ ಲೈಂಗಿಕ ಅಲ್ಪಸಂಖ್ಯಾತೆ ಮಾಡೆಲ್‌ ಒಬ್ಬರು ಆಯ್ಕೆಯಾಗಿರುವುದು ಇದೇ ಮೊದಲು...
Last Updated 11 ಜುಲೈ 2020, 9:09 IST
ಚಿತ್ರಾವಳಿ: ಸ್ವಿಮ್ ಸೂಟ್‌ನಲ್ಲಿ  ಲೈಂಗಿಕ ಅಲ್ಪಸಂಖ್ಯಾತೆ ರೂಪದರ್ಶಿ ವ್ಯಾಲೆಂಟಿನಾ ಸಂಪಾಯೊ
err

ನಿನ್ ಟಯರ್ ನಂಕೊಡು

ಗುಂಪಿನ ಪುಟ್ಟ ಹುಡುಗಿ, ತನ್ನಲ್ಲಿರುವ ಟಯರ್ ಸರಿಯಿಲ್ಲವೆಂದೂ, ‘ನನಗೆ ನಿನ್ನ ಸೈಕಲ್ ಟಯರ್ ಕೊಡು’ ಎಂದು ಗುಂಪಿನ ಹುಡುಗನ ಬಳಿ ಹಟ ಹಿಡಿದಿದ್ದಳು. ಅಲ್ಲಿದ್ದ ಕೆಂಪು ಬ್ಯಾಗಿನ ಹುಡುಗ, ಆಕೆಯ ಮೇಲೆ ಒಂದು ಚೂರೂ ರೇಗದೇ ತನ್ನಲ್ಲಿರುವ ಚಂದದ ಟಯರ್ ಅನ್ನು ಆಕೆಗೆ ನೀಡಿದಾಗ, ಆ ಹುಡುಗಿಯ ಮುಖ ಪೂರಿಯಂತೆ ಅರಳಿತು.
Last Updated 8 ಡಿಸೆಂಬರ್ 2018, 19:31 IST
ನಿನ್ ಟಯರ್ ನಂಕೊಡು
ADVERTISEMENT
ADVERTISEMENT
ADVERTISEMENT
ADVERTISEMENT