ಭಾರತದಲ್ಲಿ ಪ್ರಾರ್ಥನಾ ಸ್ಥಳಗಳು, ಜನರ ಮೇಲೆ ಹೆಚ್ಚಿದ ದಾಳಿ: ಬ್ಲಿಂಕೆನ್
ವಾಷಿಂಗ್ಟನ್: ಭಾರತದಲ್ಲಿ ಜನರು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಹೆಚ್ಚಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಪ್ರಸ್ತಾಪಿಸಿದ್ದು, ಜಗತ್ತಿನಾದ್ಯಂತ ಧಾರ್ಮಿಕ ಸ್ವತಂತ್ರದ ಪರವಾಗಿ ಅಮೆರಿಕ ನಿಲ್ಲುತ್ತದೆ ಎಂದಿದ್ದಾರೆ. ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಚೀನಾದ ಸೇರಿದಂತೆ ಏಷ್ಯಾದ ಇತರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದಾಗಿ ಹೇಳಿದ್ದಾರೆ.Last Updated 3 ಜೂನ್ 2022, 3:11 IST