ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆ ಮಳೆ
ಪ್ರಖರ ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಶಿರಸಿಯಲ್ಲಿ 20 ನಿಮಿಷ ಗುಡುಗು, ಸಿಡಿಲಿನೊಂದಿಗೆ ರಭಸದ ಮಳೆ ಸುರಿಯಿತು. ತಣ್ಣನೆಯ ಗಾಳಿ ಬೀಸಿ ಸೆಕೆ ಕಡಿಮೆಯಾಯಿತು. ಹನಿಗಳಿಗೆ ಮೈಯೊಡ್ಡಿದ ಜನರು ಅಕಾಲಿಕ ಮಳೆಯಲ್ಲಿ ಸಂಭ್ರಮಿಸಿದರು.Last Updated 25 ಮಾರ್ಚ್ 2019, 13:33 IST