‘ಟೊಯೊಟಾ ₹ 3,733 ಕೋಟಿ ತೆರಿಗೆ ಪಾವತಿಸಬೇಕು’

7
ಬಿಡದಿ ಬಳಿ ಇರುವ ಟೊಯೊಟಾ ಕಿರ್ಲೋಸ್ಕರ್

‘ಟೊಯೊಟಾ ₹ 3,733 ಕೋಟಿ ತೆರಿಗೆ ಪಾವತಿಸಬೇಕು’

Published:
Updated:
Deccan Herald

ಬೆಳಗಾವಿ: ಬಿಡದಿ ಬಳಿ ಇರುವ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ರಾಜ್ಯ ಸರ್ಕಾರಕ್ಕೆ ಮುಂದಿನ ಆರು ತಿಂಗಳ ನಂತರ ₹ 3,733 ಕೋಟಿ ತೆರಿಗೆ ಪಾವತಿಸಬೇಕಿದೆ ಎಂದು ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಗೆ ಮಾಹಿತಿ ನೀಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಂ. ಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಮೊದಲ ಹಂತದ ಘಟಕ ಆರಂಭಿಸುವಾಗ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಅದರ ಪ್ರಕಾರ ತೆರಿಗೆ ಪಾವತಿಸಬೇಕಿದೆ’ ಎಂದರು.

ರಾಜ್ಯ ಸರ್ಕಾರ ಎರಡು ಸಾವಿರ ಎಕರೆ ಭೂಮಿ ಮತ್ತು 18 ವರ್ಷದವರೆಗೆ ತೆರಿಗೆ ಪಾವತಿಗೆ ಕಾಲಮಿತಿ ವಿನಾಯಿತಿ ನೀಡಿತ್ತು.
ಇನ್ನು ಆರು ತಿಂಗಳಿಗೆ ಒಡಂಬಡಿಕೆಯಂತೆ 18 ವರ್ಷ ಪೂರ್ಣಗೊಳ್ಳಲಿದೆ ಎಂದರು.

‘ಕಾರ್ಖಾನೆ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡದೆ. ಗ್ರೂಪ್ ‘ಎ’ನಲ್ಲಿ ಶೇ 71ರಷ್ಟು, ‘ಬಿ’ ಯಲ್ಲಿ ಶೇ 86, ‘ಸಿ’ನಲ್ಲಿ ಶೇ 99, ‘ಡಿ’ನಲ್ಲಿ ಶೇ 100ರಷ್ಟು ಉದ್ಯೋಗ ನೀಡಿದೆ. ಇದೊಂದು ಉತ್ತಮ ರೀತಿಯಲ್ಲಿಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !