ಫೋನ್ ಸ್ಕ್ರೀನ್ ಸ್ವಚ್ಛ ಮಾಡುವುದು ಹೇಗೆ?

7

ಫೋನ್ ಸ್ಕ್ರೀನ್ ಸ್ವಚ್ಛ ಮಾಡುವುದು ಹೇಗೆ?

Published:
Updated:

ಫೋನ್ ಸ್ಕ್ರೀನ್ ಸ್ವಚ್ಛ ಮಾಡುವುದು ಹೇಗೆ?

ನಾವು ಬಳಸುತ್ತಿರುವ ಮೊಬೈಲ್ ಫೋನ್‌ನಲ್ಲಿ ಅದೆಷ್ಟು ರೋಗಾಣುಗಳು ಇರುತ್ತವೆ ಎಂದು ನೋಡಿದರೆ ಮತ್ತೆ ಫೋನ್ ಮುಟ್ಟುವುದಕ್ಕೆ ನಾವು ಹಿಂಜರಿಯಬೇಕಾಗುತ್ತದೆ. ಆದರೆ ಫೋನ್ ಸ್ಕ್ರೀನ್ ಸ್ವಚ್ಛವಾಗಿಡಲು ನಮ್ಮಿಂದ ಸಾಧ್ಯ.

ಹೀಗೆ ಕ್ಲೀನ್ ಮಾಡಿ

ಮೊಬೈಲ್ ಫೋನ್ ಖರೀದಿಸುವಾಗ ಅದರೊಂದಿಗೆ ಮೈಕ್ರೋ ಫೈಬರ್ ಬಟ್ಟೆಯೊಂದು ಸಿಗುತ್ತದೆ. ಕನ್ನಡಕ ಬಳಸುವವರಾದರೆ ಕನ್ನಡಕದೊಂದಿಗೆ ಈ ರೀತಿ ಬಟ್ಟೆ ಇದ್ದೇ ಇರುತ್ತದೆ. ಈ ಬಟ್ಟೆಯಲ್ಲಿ ಮಾತ್ರ ಮೊಬೈಲ್ ಸ್ಕ್ರೀನ್ ಒರೆಸಿ. ಬಟ್ಟೆ ಇಲ್ಲದೇ ಇದ್ದರೆ ಮೃದುವಾಗಿರುವ ಹತ್ತಿ ಬಟ್ಟೆಯಲ್ಲಿ ಒರೆಸಿ.

ಮೊಬೈಲ್ ಸ್ಕ್ರೀನ್ ಒರೆಸುವ ಮುನ್ನ ಫೋನ್ ಸ್ವಿಚ್ ಆಫ್ ಮಾಡಿ. ಇಲ್ಲದೇ ಇದ್ದರೆ ಸ್ಕ್ರೀನ್ ಆಫ್ ಮಾಡಿ ಮೃದುವಾಗಿ ಒರೆಸಿ.

 ಒಂದೇ ದಿಶೆಯಲ್ಲಿ ಮೃದುವಾಗಿ ಒರೆಸುತ್ತಾ ಹೋಗಿ. ಫೋನ್ ಸ್ಕ್ರೀನ್ ಮೇಲಿರುವ ದೂಳನ್ನು ಮೊದಲು ತೆಗೆಯಿರಿ. ಇನ್ಯಾವುದೇ ಕಲೆ ಇದ್ದಲ್ಲಿ ಹೆಚ್ಚಿನ ಒತ್ತಡ ಹಾಕದೆ ಮೆಲ್ಲನೆ ಒರೆಸಿ ತೆಗೆಯಿರಿ.

ಕಠಿಣ ಕಲೆ ಇದ್ದಲ್ಲಿ ಡಿಸ್ಟಿಲ್ಡ್ ವಾಟರ್ ನಲ್ಲಿ ಬಟ್ಟೆ ಅದ್ದಿ ಒರೆಸಿ. ತೇವಾಂಶ ಸ್ಕ್ರೀನ್ ನಲ್ಲಿ ಉಳಿಯದಂತೆ ಒಣಗಿದ ಬಟ್ಟೆಯಿಂದ ಮತ್ತೊಮ್ಮೆ ಒರೆಸಿ. ಯಾವುದೇ ಕಾರಣಕ್ಕೂ ಮೊಬೈಲ್ ನ್ನು ಬಿಸಿಲಿಗಿಟ್ಟು ಒಣಗಿಸಲು ಹೋಗಬೇಡಿ. ಗಾಳಿಯುವ ಕೋಣೆಯಲ್ಲಿಟ್ಟು ಮೊಬೈಲ್ ಸ್ಕ್ರೀನ್ ಒಣಗುವಂತೆ ನೋಡಿ ಕೊಳ್ಳಿ. ಪೂರ್ತಿ ಒಣಗಿದ ನಂತರವೇ ಸ್ವಿಚ್ ಆನ್ ಮಾಡಿ.

ಫೋನ್ ಸ್ಕ್ರೀನ್ ಮಾತ್ರವಲ್ಲ ಫೋನ್ ಕೇಸ್ ಕೂಡಾ ಶುಚಿಯಾಗಿರಿಸಿ. ಫೋನ್ ಕೇಸ್ ಪ್ಲಾಸ್ಟಿಕ್ ನದ್ದಾಗಿದ್ದರೆ ನೀರಿನಲ್ಲಿ ತೊಳೆಯಬಹುದು.

ಹೀಗೆ ಮಾಡಿ

ಉಗುರು ಬೆಚ್ಚಗಿನ ನೀರಿಗೆ ಒಂದು ಹನಿ ಡಿಶ್ ವಾಶ್ ಹಾಕಿ ಕದಡಿಸಿ. ಅದರಲ್ಲಿ ಬಟ್ಟೆ ಅದ್ದಿ ಇಲ್ಲವೇ ಮೃದುವಾಗಿರುವ ಟೂತ್ ಬ್ರಶ್ ನಿಂದ ನಿಧಾವಾಗಿ ಫೋನ್ ಕೇಸ್ ನನ್ನು ತೊಳೆಯಿರಿ. ಮೊಬೈಲ್ ಕೇಸ್ ನ ಒಳಗೂ ಹೊರಗೂ ಸ್ವಚ್ಛ ಮಾಡಿದ ನಂತರ ಮೃದುವಾದ ಬಟ್ಟೆಯಲ್ಲಿ ಒರೆಸಿ ಒಣಗಿಸಿ. ಪೂರ್ತಿ ಒಣಗಿದ ನಂತರವೇ ಫೋನ್ ಕೇಸ್ ನೊಳಗೆ ಫೋನ್ ಇಡಿ.

ಫೋನ್ ಕೇಸ್ ಅನ್ನು ರೋಗಾಣು ಮುಕ್ತವನ್ನಾಗಿ ಮಾಡಬೇಕು ಎಂದೆನಿಸಿದರೆ rubbing alcohol ನಲ್ಲಿ ಅದ್ದಿದ ಬಟ್ಟೆಯಿಂದ ಒರೆಸಿ.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !