ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nothing Phone 2: ವಿಶಿಷ್ಟ ವಿನ್ಯಾಸದ ನಥಿಂಗ್ ಫೋನ್ 2ಗೆ ಗಣರಾಜ್ಯೋತ್ಸವ ಕೊಡುಗೆ

Published 12 ಜನವರಿ 2024, 9:39 IST
Last Updated 12 ಜನವರಿ 2024, 9:39 IST
ಅಕ್ಷರ ಗಾತ್ರ

ನವದೆಹಲಿ: ಲಂಡನ್ ಮೂಲದ ಟೆಕ್ ಬ್ರ್ಯಾಂಡ್ 'ನಥಿಂಗ್', ಭಾರತದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ತನ್ನ ವಿಶಿಷ್ಟ ವಿನ್ಯಾಸದ 'ಫೋನ್ 2' ಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

ಈ ಅವಧಿಯಲ್ಲಿ ₹44,999 ಬೆಲೆಯ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯ ಫೋನ್ (2), 12 GB/256 GB ಆವೃತ್ತಿಯು ₹34,999ಗೆ ಲಭ್ಯವಾಗಲಿದೆ. ಇದರಲ್ಲಿ ನಥಿಂಗ್ (Nothing) ಕಾರ್ಯಾಚರಣಾ ವ್ಯವಸ್ಥೆ 2.5, ಹೊಸ ಗ್ಲಿಫ್ ಇಂಟರ್‌ಫೇಸ್ ಹಾಗೂ ಎರಡು 50MP+50MP ಸಾಮರ್ಥ್ಯದ ಪ್ರಧಾನ ಕ್ಯಾಮೆರಾ, 32 MP ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಇದೆ. ನಥಿಂಗ್ OS 2.5 ಮೂಲಕ ಗ್ರಾಹಕರು ಗ್ರಿಡ್ ವಿನ್ಯಾಸವನ್ನು, ವಿಜೆಟ್ ಗಾತ್ರಗಳನ್ನು ಮತ್ತು ವರ್ಣಮಯ ಥೀಮ್‌ಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಸ್ನ್ಯಾಪ್‌ಡ್ರ್ಯಾಗನ್ 8+1ನೇ ಪೀಳಿಗೆಯ ಪ್ರೊಸೆಸರ್ ಇದ್ದು, 4700 mAh ಬ್ಯಾಟರಿ ಸಾಮರ್ಥ್ಯವಿರುವ, ಫೋನ್ (2), ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. 20 ನಿಮಿಷಗಳೊಳಗೆ ಶೇ.50ರಷ್ಟು ಫೋನ್ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 6.7 ಇಂಚಿನ LTPO AMOLED ಡಿಸ್‌ಪ್ಲೇ ಹೊಂದಿರುವ ಈ ಫೋನ್ ಆವೃತ್ತಿಯು ಕಡುಬೂದು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಇದರೊಂದಿಗೆ, 65W CMF ವೇಗದ ಚಾರ್ಜರ್‌ಗೆ 1 ಸಾವಿರ ರೂ. ರಿಯಾಯಿತಿಯನ್ನೂ ಘೋಷಿಸಲಾಗಿದೆ. ₹2,999 ಬೆಲೆಯ ಈ ಚಾರ್ಜರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ (2) ಖರೀದಿಸುವ ಗ್ರಾಹಕರಿಗೆ ₹1,999 ಗೆ ದೊರೆಯಲಿದೆ. ಈ ಜಾರ್ಜರ್‌ನಲ್ಲಿ ಯುಎಸ್‌ಬಿ-ಸಿ ಪೋರ್ಟ್ ಹಾಗೂ ಯುಎಸ್‌ಬಿ-ಎ ಪೋರ್ಟ್‌ಗಳಿರುವುದರಿಂದ ಎರಡು ಮಾದರಿಯ ಚಾರ್ಜರನ್ನು ಬಳಸಿ ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡುವ ಅನುಕೂಲ ಇದರಲ್ಲಿದೆ. ಈ ಚಾರ್ಜರ್ ಬಳಸಿ ಫೋನ್, ಟ್ಯಾಬ್ಲೆಟ್, ಇಯರ್‌ಬಡ್, ನೋಟ್‌ಬುಕ್ ಮುಂತಾದವನ್ನು ಚಾರ್ಜ್ ಮಾಡಬಹುದಾಗಿದೆ.

ಇದಲ್ಲದೆ, ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ ₹2,000 ವಿಶೇಷ ರಿಯಾಯಿತಿ ಕೊಡುಗೆ ಇದೆ. ಜೊತೆಗೆ, ಹಳೆಯ ಫೋನ್ ವಿನಿಮಯ ಮಾಡುವುದಿದ್ದರೆ ಅಂಥ ಗ್ರಾಹಕರಿಗೆ ₹3,000 ವರೆಗಿನ ವಿನಿಮಯ ಕೊಡುಗೆಯ ಲಾಭವನ್ನೂ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT