ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯೂಎಲ್‍ಇಡಿ ಸರಣಿಯ 4ಕೆ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಥಾಮ್ಸನ್

Published : 9 ಸೆಪ್ಟೆಂಬರ್ 2022, 12:26 IST
ಫಾಲೋ ಮಾಡಿ
Comments

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಕಂಪನಿ ಥಾಮ್ಸನ್‌ ತನ್ನ ಹೊಸ ಉತ್ಪನ್ನ ಕ್ಯೂಎಲ್‍ಇಡಿ 4ಕೆ ಸರಣಿಯ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಸ್ಮಾರ್ಟ್‌ ಟಿವಿಗಳನ್ನು ಸೆಪ್ಟೆಂಬರ್‌ 8ರಂದು ಬಿಡುಗಡೆ ಮಾಡಿದೆ.

ಭಾರತದಲ್ಲಿಯೇ ತಯಾಗಿರುವ ಈ ಸರಣಿಯ50 ಇಂಚಿನ ಟಿವಿ ಬೆಲೆ ₹ 33,999 ಇದೆ. 55 ಹಾಗೂ 60 ಇಂಚಿನ ಟಿವಿಗಳು ಕ್ರಮವಾಗಿ ₹40,999 ಮತ್ತು ₹ 59,999ಕ್ಕೆ ದೊರೆಯಲಿವೆ. ಸೆಪ್ಟೆಂಬರ್‌ 8ರಿಂದ ಫ್ಲಿಪ್‌ಕಾರ್ಟ್‌ನ 'ಬಿಗ್‌ ಬಿಲಿಯನ್‌ ಡೇಸ್‌' ವೇಳೆ ಖರೀದಿಸಬಹುದಾಗಿದೆ.

ಸ್ಮಾರ್ಟ್‌ ಟಿವಿ ಆ್ಯಪ್‌ಗಳು, ಧ್ವನಿ ನಿಯಂತ್ರಣ, ಇಚ್ಛೆಗೆ ಅನುಗುಣವಾಗಿ ಹೋಂ ಡಿಸ್‌ಪ್ಲೇಸೆಟ್‌ ಮಾಡಿಕೊಳ್ಳಬಹುದಾದ ಅವಕಾಶಗಳು ಇವೆ. 2ಜಿಬಿ RAM ಹಾಗೂ 16 ಜಿಬಿROM, ವೈಫೈ ಸೌಲಭ್ಯಗಳನ್ನು ಹೊಂದಿವೆ.ಗೂಗಲ್‌ ಟಿವಿ ಫಿಚರ್‌ ಹೊಂದಿರುವ ಈ ಸ್ಮಾರ್ಟ್‌ ಟಿವಿಗಳು ವೀಕ್ಷಕರಿಗೆ ಅತ್ಯುತ್ತಮ ಅನುಭವ ನೀಡಲಿವೆ.

ಡಾಲ್ಬಿ ವಿಷನ್‌ ಹೊಂದಿರುವ ಈ ಟಿವಿಗಳು ಸಂಪೂರ್ಣ ಫ್ರೇಮ್‌ ರಹಿತವಾಗಿದ್ದು, ಗೂಗಲ್‌ ಟಿವಿ ಆ್ಯಪ್‌ ಬಳಸಿಯೂ ನಿಯಂತ್ರಿಸಬಹುದಾಗಿದೆ.ನೆಟ್‌ಫ್ಲಿಕ್ಸ್‌, ಪ್ರೈಂ ವಿಡಿಯೊ, ಹಾಟ್‌ಸ್ಟಾರ್‌, ಜೀ5, ಆ್ಯಪಲ್‌ ಟಿವಿ, ವೂಟ್‌, ಸೋನಿ ಲೈವ್‌, ಗೂಗಲ್‌ ಪ್ಲೇ ಸ್ಟೋರ್‌ ಒಳಗೊಂಡಂತೆ ಸಾವಿರಕ್ಕೂ ಹೆಚ್ಚು ಆ್ಯಪ್‌ಗಳು, ಐದು ಲಕ್ಷಕ್ಕೂ ಹೆಚ್ಚು ಟಿವಿ ಶೋಗಳನ್ನು ಒಳಗೊಂಡಿರಲಿವೆ. ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಟಿವಿಗಳು ಸ್ಟೈಲಿಷ್‌ ಲುಕ್‌ನಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT