ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಭಾರತದಲ್ಲಿ ಗೋಚರ

7

ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಭಾರತದಲ್ಲಿ ಗೋಚರ

Published:
Updated:

ಕೋಲ್ಕತ್ತ: ಈ ತಿಂಗಳ 27ರಂದು ಸಂಭವಿಸಲಿರುವ ಈ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸಲಿದೆ.

‘ಭಾರತೀಯ ಕಾಲಮಾನದ ಅನುಸಾರ ಜುಲೈ 27ರ ರಾತ್ರಿ 11.54ಕ್ಕೆ ಭಾಗಶಃ ಚಂದ್ರಗ್ರಹಣ ಆರಂಭವಾಗಲಿದೆ. ಜುಲೈ 28ರ ಬೆಳಗಿನ ಜಾವ 1 ಗಂಟೆಗೆ ಖಗ್ರಾಸ ಚಂದ್ರಗ್ರಹಣ ಆರಂಭವಾಗಲಿದೆ’ ಎಂದು ಎಂ.‍ಪಿ. ಬಿರ್ಲಾ ತಾರಾಲಯದ ನಿರ್ದೇಶಕ, ಸಂಶೋಧಕ ಹಾಗೂ ತಜ್ಞ ದೇವಿಪ್ರಸಾದ್ ದುವಾರಿ ತಿಳಿಸಿದ್ದಾರೆ.

‘ಭಾಗಶಃ ಹಾಗೂ ಖಗ್ರಾಸ ಚಂದ್ರಗ್ರಹಣ ದೇಶದ ಎಲ್ಲಾ ಭಾಗಗಳಲ್ಲಿಯೂ ಕಾಣಿಸುತ್ತದೆ. ದಕ್ಷಿಣ ಅಮೆರಿಕದ ಕೆಲವು ಭಾಗಗಳು, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಮಧ್ಯ ಏಷ್ಯಾದಲ್ಲಿಯೂ ಕಾಣಿಸಲಿದೆ. ಗ್ರಹಣ ಆರಂಭಕ್ಕೂ ಮೊದಲು ಭೂಮಿಯಿಂದ ಚಂದ್ರ 4,06,223 ಕಿ.ಮೀ ದೂರದಲ್ಲಿ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

‘ಜುಲೈ 28ರ ಬೆಳಗಿನ ಜಾವ 1.52ಕ್ಕೆ ಗ್ರಹಣ ಸಂಪೂರ್ಣವಾಗಿ ಆವರಿಸಲಿದ್ದು, 2.43ರವರೆಗೂ ಇದು ಮುಂದುವರಿಯಲಿದೆ. ಈ ಅವಧಿ ಬಳಿಕ ಬೆಳಗಿನ ಜಾವ 3.49ರವರೆಗೂ ಗ್ರಹಣ ಭಾಗಶಃ ಗೋಚರಿಸಲಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸುವುದರಿಂದ ಇದು ‘ಬ್ಲಡ್ ಮೂನ್’ ಎಂದೂ ಪ್ರಸಿದ್ಧವಾಗಿದೆ.

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !