ಚಂದ್ರನಲ್ಲಿ ಘನೀಕೃತ ನೀರು: ದೃಢಪಡಿಸಿದ ಚಂದ್ರಯಾನ–1

7

ಚಂದ್ರನಲ್ಲಿ ಘನೀಕೃತ ನೀರು: ದೃಢಪಡಿಸಿದ ಚಂದ್ರಯಾನ–1

Published:
Updated:

ವಾಷಿಂಗ್ಟನ್ (ಪಿಟಿಐ): ಚಂದ್ರನ ಧ್ರುವಗಳ ಕಗ್ಗತ್ತಲ ಹಾಗೂ ತಂಪಾದ ಪ್ರದೇಶಗಳಲ್ಲಿ ಘನೀಕೃತ ರೂಪದಲ್ಲಿ ನೀರಿನ ಸಂಗ್ರಹವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 10 ವರ್ಷಗಳ ಹಿಂದೆ ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ–1 ನೌಕೆಯ ದತ್ತಾಂಶಗಳನ್ನು ಆಧರಿಸಿ ಇದನ್ನು ದೃಢಪಡಿಸಿದ್ದಾರೆ. 

ಚಂದ್ರನ ಮೇಲ್ಮೈನ ಕೆಲವು ಮಿಲಿಮೀಟರ್‌ನಲ್ಲಿ ಮಾತ್ರ ಮಂಜುಗಡ್ಡೆಯ ದಾಸ್ತಾನಿದ್ದು, ಅದರಿಂದ ನೀರು ಲಭ್ಯವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಭವಿಷ್ಯದ ಗಗನಯಾನಗಳಿಗೆ ಇದು ಮುಖ್ಯ ಸಂಪನ್ಮೂಲವಾಗಲಿದೆ. ಇದು ಗ್ರಹದ ಮೇಲ್ಮೈನಲ್ಲಿ ಚದುರಿದಂತೆ ಹರಡಿಕೊಂಡಿದ್ದು, ಪುರಾತನವಾದ ಸಂಗ್ರಹವಾಗಿರಬಹುದು ಎಂದು ಅಂದಾಜಿಸಿದ್ದಾರೆ. 

ದಕ್ಷಿಣ ಧ್ರುವದ ಚಂದ್ರನ ಕುಳಿಗಳಲ್ಲಿ ಘನೀಕೃತ ರೂಪ ಅಡಗಿದೆ. ಉತ್ತರ ಧ್ರುವದಲ್ಲಿ ಅಲ್ಲಲ್ಲಿ ಚದುರಿದೆ. ಚಂದ್ರನ ತಿರುಗುವ ಅಕ್ಷವು ಕೊಂಚ ಓರೆಯಾದ ಕಾರಣ ಈ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಅಷ್ಟಾಗಿ ತಾಗಿಲ್ಲ. 

ಚಂದ್ರಯಾನ ನೌಕೆಯಲ್ಲಿ ಅಳವಡಿಸಿದ್ದ ನಾಸಾದ ‘ಮೂನ್ ಮಿನರಾಲಜಿ ಮ್ಯಾಪರ್’ (ಎಂ3) ಎಂಬ ಸಾಧನವು ಮೂರು ನಿರ್ದಿಷ್ಟ ಕುರುಹುಗಳನ್ನು ಪತ್ತೆಹಚ್ಚಿದ್ದು, ಇಲ್ಲಿ ಖಚಿತವಾಗಿ ನೀರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಕೇವಲ ಮಂಜುಗಡ್ಡೆ ಪ್ರತಿಫಲನಗೊಳ್ಳುವುದನ್ನು ಕಂಡು ಇದನ್ನು ಖಚಿತಪಡಿಸಿಕೊಂಡಿಲ್ಲ. ಅತಿಗೆಂಪು ಬಣ್ಣವನ್ನು ಹೀರಿಕೊಳ್ಳುವ ಕಣಗಳನ್ನು ನೇರವಾಗಿ ಅಳೆಯುವ ವಿಶಿಷ್ಟ ಮಾರ್ಗ ಅನುಸರಿಸಲಾಗಿದೆ. ದ್ರವರೂಪದ ನೀರು, ಆವಿ ಹಾಗೂ ಘನರೂಪದ ಮಂಜುಗಡ್ಡೆಯ ಮಧ್ಯೆ ವ್ಯತ್ಯಾಸ ಅರಿಯಲು ಸಾಧ್ಯವಾಗಿದೆ. 

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !