ಶುಕ್ರವಾರ, ಡಿಸೆಂಬರ್ 6, 2019
18 °C

ಚಂದ್ರನ ಮೇಲೆ ಮಾನವ ಹೆಜ್ಜೆ ಗುರುತು ದಾಖಲಿಸಿ 50 ವರ್ಷವಾಯ್ತು

Published:
Updated:
Prajavani

ಮಾನವ ಚಂದ್ರನಲ್ಲಿಗೆ ಕಾಲಿಟ್ಟು ಇಂದಿಗೆ 50 ವರ್ಷಗಳೇ ಸಂದಿವೆ. ಅದರ ಹೆಜ್ಜೆ ಗುರುತುಗಳನ್ನು ನೋಡುವುದಾದರೆ,  ಏಪ್ರಿಲ್ 12 , 1961ರಂದು ಸೋವಿಯತ್ ಆಕಾಶನೌಕೆ ವೋಸ್ತೋಕ್-1ರಲ್ಲಿ ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ಮಾನವ ಯೂರಿ ಗ್ಯಾಗರಿನ್.

ಇದನ್ನೂ ಓದಿ: ಇಂದು (ಜುಲೈ 22) ಮಧ್ಯಾಹ್ನ 2.43ಕ್ಕೆ ಚಂದ್ರಯಾನ–2 ಉಡ್ಡಯನ

ಭೂಮಿಯನ್ನು ಒಂದು ಸುತ್ತು ಸುತ್ತಿ 90 ನಿಮಿಷಗಳಲ್ಲಿ ಸೋವಿಯತ್ ಯೂನಿಯನ್ ನೆಲದಲ್ಲಿ ಸುರಕ್ಷಿತವಾಗಿ ಇಳಿದ. ತದನಂತರ ಜುಲೈ 20 1969ರಂದು ಚಂದ್ರನ ಮೇಲೆ ಕಾಲಿಟ್ಟ ಮೊ‌ದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು ನೀಲ್ ಆರ್ಮ್ ಸ್ಟ್ರಾಂಗ್. ಅವರು ವಿಮಾನಯಾನಿಯಾಗಿದ್ದರು. ಕೊರಿಯಾ ವಿರುದ್ಧ 78 ಮಿಷನ್ ವಿಮಾನಗಳನ್ನು ಹಾರಿಸಿದ್ದ. ಇದಾದ ನಂತರ ನಾಸಾದ ಟೆಸ್ಟ್ ಪೈಲಟ್ ಆಗಿ ಸೇರಿದ. 1962 ರಲ್ಲಿ ಗಗನಯಾತ್ರಿಗಳ ತಂಡಕ್ಕೆ ಆಯ್ಕೆಯಾಗಿ, ಮಾರ್ಚ್ 16 1962 ರಲ್ಲಿ ಪ್ರಾರಂಭವಾದ ಜೆಮಿನಿ-8 ಮಿಷನ್ ನ ಪೈಲಟ್ ಆಗಿದ್ದ. ನಂತರ 1969‌ರಲ್ಲಿ ಅಪೊಲೋ-11 ಗಗನನೌಕೆಯ ಕಮಾಂಡರ್ ಆಗಿ ನೇಮಕಗೊಂಡ.

ಇದನ್ನೂ ಓದಿ: ತಾಂತ್ರಿಕ ದೋಷ ನಿವಾರಣೆ, ಉಡ್ಡಯನಕ್ಕೆ ರಾಕೆಟ್‌ ಸಮರ್ಥ- ಇಸ್ರೊ

ಅವನ ಸಹಯಾತ್ರಿಗಳಾದ ಮೈಕೆಲ್ ಕಾಲಿನ್ಸ್ ಮತ್ತು ಆಲ್ಡ್ರಿನ್ ಜೊತೆಗೂಡಿ ಆಕಾಶದೆಡೆಗೆ ಹಾರಿದ. ನೌಕೆಯ ಕಮಾಂಡರ್ ಮಾಡ್ಯುಲ್ ಕೊಲಂಬಿಯಾದಲ್ಲಿ ಕಾಲಿನ್ಸ್ ಚಂದ್ರನ ಸುತ್ತ ಸುತ್ತಿ ಬಂದರೆ, ಆರ್ಮ್ ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಲೂನಾರ್ ಮಾಡ್ಯುಲ್ “ಈಗಲ್” ನಲ್ಲಿ ಚಂದ್ರನ ಮೇಲೆ ಕಾಲಿಟ್ಟರು.

ಚಂದ್ರನ ಮೇಲೆ ಮೊದಲು ಕಾಲಿಟ್ಟವನು ನೀಲ್ ಆರ್ಮ್ ಸ್ಟ್ರಾಂಗ್. ಆತ ಚಂದ್ರನ ಮೇಲೆ ಕಾಲಿಟ್ಟವನೇ ಹೀಗೆ ಉದ್ಘರಿಸಿದ. “ಮನುಷ್ಯನಿಗೆ ಅದು ಒಂದು ಸಣ್ಣ ಹೆಜ್ಜೆ. ಮನುಕುಲಕ್ಕೆ ಭಾರಿ ನೆಗೆತ’  ಚಂದ್ರನಲ್ಲಿ ಇಳಿದು ಚಂದ್ರನ ನೆಲದಲ್ಲಿ ಸುತ್ತಾಡಿ ಅಮೆರಿಕ ಧ್ವಜವನ್ನು ನೆಟ್ಟು ಖುಷಿ ಪಟ್ಟವನು ನೀಲ್ ಆರ್ಮ್ ಸ್ಟ್ರಾಂಗ್. ಚಂದ್ರನಲ್ಲಿ ಸಿಕ್ಕ ಕಲ್ಲು, ಖನಿಜಗಳನ್ನು ತಂದು ನಾಸಾದ ಪ್ರಯೋಗಾಲಯದಲ್ಲಿ ಇಟ್ಟು ಸಾಕ್ಷಿಯಾದ. 1971ರಲ್ಲಿ ನಾಸಾದಿಂದ ನಿವೃತ್ತಿ ಪಡೆದ ನೀಲ್ ಆರ್ಮ್ ಸ್ಟ್ರಾಂಗ್ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಒಂದು ದಶಕದಷ್ಟು ಕಾಲ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದನು.ಜೇಮ್ಸ್ ಹಾನ್ಸನ್ ಎಂಬ ನಾಸಾದ ಇತಿಹಾಸಕಾರ ನೀಲ್ ಆರ್ಮ್ ಸ್ಟ್ರಾಂಗ್ ನ ಅಧಿಕೃತ ಆತ್ಮಚರಿತೆಯನ್ನು  ’ಫಸ್ಟ್ ಮ್ಯಾನ್ ದಿ ಲೈಫ್ ಆಫ್ ನೀಲ್ ಆರ್ಮ್ ಸ್ಟ್ರಾಂಗ್’ನಲ್ಲಿ ವಿವರಿಸಿದ್ದಾನೆ. ಅದು ಪ್ರಕಟಗೊಂಡದ್ದು 2005 ರಲ್ಲಿ. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಉದ್ಗರಿಸಿದ ಮಾತುಗಳನ್ನು ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತಿದೆ.

ಇದುವರೆಗೆ ಚಂದ್ರನಲ್ಲಿ 20ಕ್ಕೂ ಹೆಚ್ಚು ಗಗನಯಾತ್ರಿಗಳು ಕಾಲಿಟ್ಟು ಬಂದಿದ್ದಾರೆ. ನಮ್ಮ ಹೆಮ್ಮೆಯ ವಿಜ್ಞಾನ ಸಂಸ್ಥೆ  ಇಸ್ರೊ ಹಲವು ವಿಶೇಷಗಳನ್ನು ಒಳಗೊಂಡ ಚಂದ್ರಯಾನ-2 ನ್ನು ಚಂದ್ರನಲ್ಲಿಗೆ ಪುನಃ ಕಳುಹಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಮ್ಮ ಭಾರತೀಯರೂ ಚಂದ್ರನಲ್ಲಿಗೆ ಆದಷ್ಟು ಬೇಗನೇ ಕಾಲಿಟ್ಟು ಇತಿಹಾಸ ಮಾಡಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು