ಸೋಮವಾರ, ಅಕ್ಟೋಬರ್ 3, 2022
24 °C

ಟ್ವಿಟರ್ ಐಎನ್‌ಸಿಗೆ ಟ್ವಿಟರ್ ಇಂಡಿಯಾದಲ್ಲಿ ಯಾವ ಷೇರೂ ಇಲ್ಲ: ಹೈಕೋರ್ಟ್‌ಗೆ ಎಂಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ವಿಟರ್ ಇಂಡಿಯಾ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಮೂಲ ಕಂಪನಿ ಟ್ವಿಟರ್ ಐಎನ್‌ಸಿ ಇದರಲ್ಲಿ ಒಂದು ಷೇರೂ ಹೊಂದಿಲ್ಲ ಎಂದು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ.

ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ ಕೋಮು ಸೂಕ್ಷ್ಮ ವಿಡಿಯೊದ ತನಿಖೆಯ ಭಾಗವಾಗಿ ಉತ್ತರಪ್ರದೇಶ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಮಹೇಶ್ವರಿ ಸಲ್ಲಿಸಿದ್ದ ಅರ್ಜಿಯ ಕುರಿತು ಹೈಕೋರ್ಟ್ ಏಕಸದಸ್ಯ ಪೀಠದ ಎದುರು ವಿಚಾರಣೆಯ ವೇಳೆ ಈ ಸಲ್ಲಿಕೆ ಮಾಡಲಾಗಿದೆ.

ನ್ಯಾಯಮೂರ್ತಿ ಜಿ ನರೇಂದ್ರ ಅವರು ಶುಕ್ರವಾರ ಪ್ರಕರಣದ ಕುರಿತ ಆದೇಶ ನೀಡುವ ನಿರೀಕ್ಷೆ ಇದೆ. ಅಮೆರಿಕದ ಟ್ವಿಟರ್ ಐಎನ್‌ಸಿಯ ಪ್ರಧಾನ ಕಚೇರಿಯನ್ನು ಮಾತೃ ಸಂಸ್ಥೆ ಎಂದು ಕರೆಯಬಹುದೇ ಎಂದು ನ್ಯಾಯಮೂರ್ತಿ ನರೇಂದ್ರ ಅವರು ಕೇಳಿದಾಗ, ಮಹೇಶ್ವರಿ ಪರ ವಕೀಲ ಸಿ.ವಿ. ನಾಗೇಶ್, ‘ಟ್ವಿಟರ್ ಐಎನ್‌ಸಿಯು ಒಂದು ಮೂಲ ಕಂಪನಿಯಾಗಿದೆ. ಅದಕ್ಕೂ (ಟ್ವಿಟರ್ ಐಎನ್‌ಸಿ) ನಮಗೂ ಯಾವುದೇ ಸಂಬಂಧವಿಲ್ಲ. ಇದು (ಟ್ವಿಟರ್ ಇಂಡಿಯಾ) ಸ್ವತಂತ್ರ ಸಂಸ್ಥೆ.’ಎಂದು ಹೇಳಿದ್ದಾರೆ.

ಟ್ವಿಟರ್ ಇಂಡಿಯಾದ ಪ್ರಮೋಟರ್ಸ್ ಮತ್ತು ಷೇರುದಾರರ ಮಾದರಿಗಳ ಬಗ್ಗೆ ನ್ಯಾಯಾಧೀಶರು ಕೇಳಿದಾಗ, ಟ್ವಿಟರ್ ಇಂಡಿಯಾ ಟ್ವಿಟರ್ ಐಎನ್‌ಸಿಯ ಅಂಗಸಂಸ್ಥೆ ಮಾತ್ರ ಎಂದು ವಕೀಲರು ಹೇಳಿದರು.

‘ಟ್ವಿಟರ್ ಯುಎಸ್ಎ (ಐಎನ್‌ಸಿ) ಭಾರತದಲ್ಲಿ ಒಂದು ಷೇರನ್ನೂ ಹೊಂದಿಲ್ಲ. ಅದಕ್ಕಾಗಿಯೇ ಇದು ಸಂಪೂರ್ಣವಾಗಿ ವಿಭಿನ್ನ ಘಟಕ ಎಂದು ನಾನು ಹೇಳುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು