ಅದನ್ನು ಈಚೆಗಷ್ಟೇ ಮೇಲ್ದರ್ಜೆಗೇರಿಸಿದೆ. ವಯರ್ ಇಲ್ಲದೆಯೇ ಇದನ್ನು ರಿಚಾರ್ಜ್ ಮಾಡಬಹುದಾಗಿದೆ. ಆದರೆ, ಇದು ಕಂಪನಿಯು ಮೊಟ್ಟ ಮೊದಲ ಬಾರಿಗೆ ಬಿಡುಗಡೆ ಮಾಡಿರುವುದನ್ನೇ ಹೋಲುತ್ತಿದೆ. ಹೀಗಾಗಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. ಇದು 2020ಕ್ಕೂ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಇದು ಏರ್ಪಾಡ್ಸ್ಗಿಂತಲೂ ದುಬಾರಿಯಾಗಿರಲಿದೆಯಂತೆ.