ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯ ದಂಡದ ಶೇ 10ರಷ್ಟು ಪಾವತಿಸಲು ಗೂಗಲ್‌ಗೆ ಎನ್‌ಸಿಎಲ್‌ಎಟಿ ನಿರ್ದೇಶನ

Last Updated 5 ಜನವರಿ 2023, 6:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ವಿಧಿಸಿರುವ ₹ 1,337.76 ಕೋಟಿ ದಂಡದಲ್ಲಿ ಶೇ 10ರಷ್ಟು ಮೊತ್ತವನ್ನು ಪಾವತಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಗೂಗಲ್‌ಗೆ ನಿರ್ದೇಶನ ನೀಡಿದೆ.

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಗೂಗಲ್ ಕಂಪನಿಗೆ ಸಿಸಿಐ ದಂಡ ವಿಧಿಸಿದೆ.

ಇದಕ್ಕೆ ಗೂಗಲ್‌ ಕಂಪನಿಯು ಆಕ್ಷೇಪ ವ್ಯಕ್ತಪಡಿಸಿದೆ. ಸಿಸಿಐ ತೀರ್ಪಿಗೆ ತಕ್ಷಣವೇ ತಡೆ ನಿಡುವಂತೆ ಗೂಗಲ್‌ ಕಂಪನಿಯು ಎನ್‌ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮಂಡಳಿಯು ಒಪ್ಪಿಗೆ ನೀಡಿದೆ. ಆದರೆ, ಸಿಸಿಐ ನೀಡಿರುವ ಆದೇಶಕ್ಕೆ ತಕ್ಷಣ ತಡೆ ನೀಡಲು ಅದು ನಿರಾಕರಿಸಿದೆ. ಪ್ರತಿವಾದಿಯ ಹೇಳಿಕೆಯ ಬಳಿಕ ನಿರ್ಧಾರಕ್ಕೆ ಬರುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT