ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಚಾಹಲ್‌ರನ್ನು ಎತ್ತಿ ಗರಗರನೆ ತಿರುಗಿಸಿದ ಕುಸ್ತಿಪಟು ಸಂಗೀತಾ ಪೋಗಟ್‌

Published 3 ಮಾರ್ಚ್ 2024, 8:22 IST
Last Updated 3 ಮಾರ್ಚ್ 2024, 8:22 IST
ಅಕ್ಷರ ಗಾತ್ರ

ಮುಂಬೈ: ಕುಸ್ತಿ ಮತ್ತು ಕ್ರಿಕೆಟ್‌ ನಡುವೆ ಸ್ಪರ್ಧೆ ಏರ್ಪಟ್ಟರೆ ಯಾರು ಗೆಲ್ಲಬಹುದು... ಕುಸ್ತಿಪಟು ಸಂಗೀತಾ ಫೋಗಟ್‌ ಮತ್ತು ಕ್ರಿಕೆಟಿಗ ಯಜುವೇಂದ್ರ ಚಾಹಲ್ ನಡುವೆ ಹೀಗೊಂದು ಸ್ಪರ್ಧೆ ಏರ್ಪಟ್ಟಿದ್ದು, ಚಾಹಲ್‌ ಅವರನ್ನು ಭುಜದ ಮೇಲೆ ಹಾಕಿಕೊಂಡ ಸಂಗೀತಾ, ಗರಗರನೇ ತಿರುಗಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಾಹಲ್ ಸ್ಥಿತಿ ಕಂಡು ನೆಟ್ಟಿಗರು ನಗೆಗಡಲಿನಲ್ಲಿ ತೇಲಾಡಿದ್ದಾರೆ.

ಚಾಹಲ್‌ರನ್ನು ಎತ್ತಿ ಭುಜದ ಮೇಲೆ ಹಾಕಿಕೊಂಡ ಸಂಗೀತಾ, ಒಂದೇ ಸಮನೆ ತಿರುಗಿಸಿದ್ದಾರೆ. ಈ ವೇಳೆ ತನ್ನನ್ನು ಬಿಟ್ಟು ಬಿಡುವಂತೆ ಚಾಹಲ್ ವಿನಂತಿಸಿರುವುದು ಕಾಣಬಹುದಾಗಿದೆ.

ಹಿಂದಿಯ ‘ಜಲಕ್ ದಿಕ್ ಆಜಾ’ ಡ್ಯಾನ್ಸ್ ರಿಯಾಲಿಟಿ ಶೋದ ‘ರ್‍ಯಾಪ್‌ ಅಪ್‌ ಪಾರ್ಟಿ’ಯಲ್ಲಿ(wrap up party) ಭಾಗವಹಿಸಿದ್ದ ಚಾಹಲ್ ಮತ್ತು ಸಂಗೀತಾ ಮೋಜಿನ ಕ್ಷಣಗಳನ್ನು ಕಳೆದಿದ್ದಾರೆ. ಈ ಶೋದಲ್ಲಿ ಚಾಹಲ್ ಪತ್ನಿ ಧನಶ್ರೀ ಭಾಗವಹಿಸಿದ್ದು, ಫೈನಲ್ ಸುತ್ತಿಗೂ ಬಂದಿದ್ದರು.

ಕುಸ್ತಿ ಫೆಡೆರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಶರಣ್ ಸಿಂಗ್ ಮೇಲೆ ಲೈಂಗಿಕ ದೌರ್ಜನ್ಯನದ ಆರೋಪ ಮಾಡಿದ್ದ ಕುಸ್ತಿಪಟುಗಳಲ್ಲಿ ಸಂಗೀತಾ ಫೋಗಟ್ ಕೂಡ ಒಬ್ಬರು. ಸದಾ ಪ್ರತಿಭಟನೆ, ಹೋರಾಟದ ಸುದ್ದಿಯಲ್ಲಿಯೇ ಮುಳುಗಿದ್ದ ಸಂಗೀತಾ ಅವರು ಮಸ್ತಿ ಮಾಡಿರುವುದನ್ನು ಕಂಡು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT