ಸಹೋದರಿಯ ರಾಜಕೀಯ ಪ್ರವೇಶಕ್ಕೆ ಥಾಯ್ಲೆಂಡ್‌ ರಾಜನಿಂದ ತಡೆ

7
ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ರಾಣಿ ಉಬೊಲ್‌ರತಾನಾ

ಸಹೋದರಿಯ ರಾಜಕೀಯ ಪ್ರವೇಶಕ್ಕೆ ಥಾಯ್ಲೆಂಡ್‌ ರಾಜನಿಂದ ತಡೆ

Published:
Updated:
Prajavani

ಬ್ಯಾಂಕಾಕ್‌: ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ಸಹೋದರಿಯ ನಿರ್ಧಾರವನ್ನು ಥಾಯ್ಲೆಂಡ್‌ನ ರಾಜ ವಜಿರಾಲಾಂಗ್‌ಕಾರ್ನ್‌ ಅವರು ಬಹಿರಂಗವಾಗಿ ಖಂಡಿಸಿದ್ದಾರೆ. ಇದರ ಬೆನ್ನಲ್ಲೇ, ರಾಜನ ಆದೇಶವನ್ನು ಪಾಲಿಸುವುದಾಗಿ ತಿಳಿಸಿರುವ ಥಾಯ್‌ ರಕ್ಷಾ ಚಾರ್ಟ್‌ ಪ‍ಕ್ಷವು ರಾಣಿಯ ಪರ ಪ್ರಚಾರವನ್ನು ಕೈಬಿಡುವುದಾಗಿ ಸ್ಪಷ್ಟಪಡಿಸಿದೆ.

ಮಾರ್ಚ್‌ 24ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಥಾಯ್ಲೆಂಡ್‌ನ ರಾಣಿ 67 ವರ್ಷದ ಉಬೊಲ್‌ರತಾನಾ ರಾಜಕನ್ಯಾ ಅವರು ಶುಕ್ರವಾರ ಘೋಷಿಸಿದ್ದರು. 

ಉಬೊಲ್‌ರತಾನಾ, ಥಾಯ್ಲೆಂಡ್‌ನ ರಾಜ ವಜಿರಾಲಾಂಗ್‌ಕಾರ್ನ್‌ ಅವರ ಹಿರಿಯ ಸಹೋದರಿ. ದೇಶವನ್ನು 70 ವರ್ಷಗಳ ಕಾಲ ಆಡಳಿತ ನಡೆಸಿದ್ದ ಭೂಮಿಬೋಲ್‌ ಅದ್ಯುದೇಜ್‌ ಅವರು 2016ರ ಅಕ್ಟೋಬರ್‌ನಲ್ಲಿ ನಿಧನ ಹೊಂದಿದ್ದರು. ಇದೇ ಮೇ ತಿಂಗಳಲ್ಲಿ ವಜಿರಾ ಅವರ ಪಟ್ಟಾಭಿಷೇಕ ನಡೆಯಲಿದೆ. 

ರಾಜಪ್ರಭುತ್ವದ ಜವಾಬ್ದಾರಿಯನ್ನಷ್ಟೇ ಹೊತ್ತಿದ್ದ ಇಲ್ಲಿನ ರಾಜಮನೆತನದ ಸದಸ್ಯರೊಬ್ಬರು ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದ ಕಾರಣ ದೇಶದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಇದೀಗ ಅರಮನೆಯು ರಾಣಿಯ ರಾಜಕೀಯ ಪ್ರವೇಶವನ್ನು ಖಂಡಿಸಿ ಪ್ರಕಟಣೆಯೊಂದನ್ನು ಹೊರಡಿಸಿದೆ.

‘ರಾಜಪರಂಪೆಯ ಸದಸ್ಯರೊಬ್ಬರು ನೇರ ಚುನಾವಣೆಗೆ ಕಣಕ್ಕಿಳಿಯುವುದು ದೇಶದ ಸಂಸ್ಕೃತಿ, ಸಂಪ್ರದಾಯಕ್ಕೆ ವಿರುದ್ಧ ಹಾಗೂ ಅನುಚಿತವಾದದ್ದು’ ಎಂದು ಸ್ಪಷ್ಟಪಡಿಸಿದೆ.

ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ, ರಾಜನ ಆದೇಶಕ್ಕೆ ತಲೆಬಾಗಿ ರಾಣಿಯ ಪರ ಪ್ರಚಾರವನ್ನು ಕೈಬಿಡುವುದಾಗಿ ಥಾಯ್‌ ರಕ್ಷಾ ಚಾರ್ಟ್‌ ಪ‍ಕ್ಷ ಸ್ಷಷ್ಟಪಡಿಸಿದೆ. ರಾಣಿಯ ರಾಜಕೀಯ ಪ್ರವೇಶಕ್ಕೆ ತಡೆ ಒಡ್ಡಿರುವುದಕ್ಕೆ ಥಾಯ್ಲೆಂಡ್‌ನ ಗಣ್ಯವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !