ಟ್ರಂಪ್‌ ಮಾಜಿ ಸಲಹೆಗಾರನಿಗೆ ಜೈಲು

7

ಟ್ರಂಪ್‌ ಮಾಜಿ ಸಲಹೆಗಾರನಿಗೆ ಜೈಲು

Published:
Updated:
ಜಾರ್ಜ್‌ ಪಾಪಡೊಪೊಲಸ್‌ (ಚಿತ್ರಕೃಪೆ: ಡೈಲಿ ಮಿರರ್‌)

ವಾಷಿಂಗ್ಟನ್‌ : ಅಮೆರಿಕ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ರಷ್ಯಾದೊಂದಿಗೆ ಹಂಚಿಕೊಂಡ ಆರೋಪದ ಮೇಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಾಜಿ ಸಲಹೆಗಾರ ಜಾರ್ಜ್‌ ಪಾಪಡೊಪೊಲಸ್‌ ಅವರಿಗೆ 14 ದಿನಗಳ ಜೈಲು ಶಿಕ್ಷೆ ಮತ್ತು ₹198 ಕೋಟಿ (20 ಮಿಲಿಯನ್‌ ಅಮೆರಿಕನ್‌ ಡಾಲರ್‌) ದಂಡ ವಿಧಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶ ರಾಂಡೊಲ್ಫ್‌ ಮೊಸ್‌ ಅವರು ತೀರ್ಪು ನೀಡಿದ್ದಾರೆ. ಪಾಪಡೊಪೊಲಸ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೂ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. 

ಟ್ರಂಪ್‌ ಅವರ ಚುನಾವಣಾ ಪ್ರಚಾರ ಸಲಹೆಗಾರನಾಗಿ 2016ರಲ್ಲಿ ನೇಮಕಗೊಂಡ ಪಾಪಡೊಪೊಲಸ್‌, ರಷ್ಯಾದೊಂದಿಗೆ ಉತ್ತಮ ಸಂಬಂಧ ಸುಧಾರಣೆ ನೆಪದಲ್ಲಿ ಅಲ್ಲಿನ ಪ್ರೊಫೆಸರ್‌ ಜೋಸೆಫ್‌ ಮಿಫ್ಸದ್‌ ಎಂಬುವರೊಂದಿಗೆ ಸಂಪರ್ಕ ಹೊಂದಿದ್ದರು. ಮಿಫ್ಸದ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆಪ್ತರನ್ನು ಪಾಪಡೊಪೊಲಸ್‌ ಅವರಿಗೆ ಪರಿಚಯಿಸಿದ್ದರು. ಹಲವು ಇ–ಮೇಲ್‌ಗಳು ಇವರ ನಡುವೆ ಹರಿದಾಡಿದ್ದವು.

ಟ್ರಂಪ್‌ ಪರ ಪ್ರಚಾರಕರು ರಷ್ಯಾದೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಅಮೆರಿಕ ತನಿಖಾ ಸಂಸ್ಥೆ ಎಫ್‌ಬಿಐ ತನಿಖೆ ನಡೆಸಿತ್ತು. ರಷ್ಯಾದೊಂದಿಗೆ ಸಂಪರ್ಕ ಹೊಂದಿದ್ದಾಗಿ ಪಾಪಡೊಪೊಲಸ್‌ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿದ್ದರು.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !