ಹಾಸ್ಯ ನಟ ವೊಲೊಡಿಮಿರ್‌ ಉಕ್ರೇನ್‌ ಅಧ್ಯಕ್ಷರಾಗುವ ಸಾಧ್ಯತೆ

ಶುಕ್ರವಾರ, ಏಪ್ರಿಲ್ 26, 2019
21 °C

ಹಾಸ್ಯ ನಟ ವೊಲೊಡಿಮಿರ್‌ ಉಕ್ರೇನ್‌ ಅಧ್ಯಕ್ಷರಾಗುವ ಸಾಧ್ಯತೆ

Published:
Updated:

ಕೀವ್‌: ಹಾಸ್ಯ ನಟ ವೊಲೊಡಿಮಿರ್‌ ಝೆಲೆನ್ಸ್ಕಿ ಅವರೇ ಉಕ್ರೇನ್‌ನ ಅಧ್ಯಕ್ಷರಾಗುವಲ್ಲಿ ವಹಿಸುವಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.

ಭಾನುವಾರ ನಡೆದ ಸಮೀಕ್ಷೆಯ ಮೊದಲ ಸುತ್ತಿನಲ್ಲಿ ಜನರು ಝೆಲೆನ್ಸ್ಕಿ ಪರ ಒಲವು ತೋರಿದ್ದಾರೆ.  ಝೆಲೆನ್ಸ್ಕಿ ಅವರ ಐಷಾರಾಮಿ ಜೀವನ, ಭ್ರಷ್ಟಾಚಾರಗಳ ನಡುವೆಯೂ ಜನರು ಅವರತ್ತ ಒಲವು ತೋರಿದ್ದಾರೆ. 

ಸುಮಾರು ನಾಲ್ಕೂವರೆ ಕೋಟಿ ಜನರು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಪ್ರೇರಿತ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಝೆಲೆನ್ಸ್ಕಿ ಅವರು ಇತರ ಎಲ್ಲ ರಾಜಕಾರಣಿಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದಾರೆ.

41ರ ಹರೆಯದ ಝೆಲೆನ್ಸ್ಕಿಅವರು ತಮ್ಮ ರಾಜಕೀಯ ಹಾಸ್ಯ ಸರಣಿ ‘ಸರ್ವೆಂಟ್‌ ಆಫ್‌ ದಿ ಪೀಪಲ್‌’  ಮೂಲಕ ಜನಪ್ರಿಯರಾಗಿದ್ದರು. ಈ ವರ್ಷ ಅದು ಮೂರನೇ ಆವೃತ್ತಿಗೆ ಕಾಲಿಟ್ಟಿದೆ. ಇದರ ಜತೆಗೆ ಅವರ ರಾಜಕೀಯ ಬೆಳವಣಿಗೆಯಲ್ಲಿ ಅವರಿಗೆ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಶೇ 25ರಷ್ಟು ಪ್ರಮಾಣದಲ್ಲಿ ಜನಬೆಂಬಲ ಹೆಚ್ಚಿದೆ.

ಮತಪತ್ರದಲ್ಲಿ 39 ಅಭ್ಯರ್ಥಿಗಳು ಇದ್ದಾರೆ. ಇವರ ಪೈಕಿ ಪೆಟ್ರೊ ಪೊರೊಷೆಂಕೊ, ಯುಲಿಯಾ ತ್ಯಾಮೊಶೆಂಕೋ ಮತ್ತು ಝೆಲೆನ್ಸ್ಕಿಈ  ಮೂವರು ಮಾತ್ರ ಮುಂಚೂಣಿಯಲ್ಲಿದ್ದಾರೆ. ಇವರಲ್ಲೇ ಹಣಾಹಣಿ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !