ಬುಧವಾರ, ಏಪ್ರಿಲ್ 14, 2021
24 °C

‘ಹಳ್ಳಿಯಲ್ಲೇ ಉದ್ಯೋಗ ಸೃಷ್ಟಿಸಿದರೆ ಶರಾವತಿ ನೀರು ತರಬೇಕಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯಾದರೆ, ಕೆಲಸಕ್ಕಾಗಿ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಆಗ, ನಗರಕ್ಕೆ ಶರಾವತಿಯಿಂದ ನೀರು ತರಿಸುವ ಅಗತ್ಯವೇ ಬೀಳುವುದಿಲ್ಲ’ ಎಂದು ದೇಸಿ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಹೇಳಿದರು. 

ಬನಶಂಕರಿ ಮೊದಲನೇ ಹಂತದಲ್ಲಿ ಶನಿವಾರ ದೇಸಿ ಅಂಗಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಜನರಲ್ಲಿ ತಂತ್ರಜ್ಞಾನದ ಅರಿವು ಅಷ್ಟಿರುವುದಿಲ್ಲ ಆದರೆ, ಶ್ರಮ ಸಂಸ್ಕೃತಿ ಹೆಚ್ಚಿರುತ್ತದೆ. ನಗರದವರು ಬುದ್ಧಿವಂತರು. ಅವರಲ್ಲಿ ತಂತ್ರಜ್ಞಾನದ ಅರಿವು ಇರುತ್ತದೆ. ಬೆಂಗಳೂರಿನವರೂ ಹಳ್ಳಿಗಳತ್ತ ತೆರಳಬೇಕು. ಪರಸ್ಪರರು ಕಲಿತುಕೊಂಡು ಕೆಲಸ ಮಾಡುವಂತಾದರೆ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು. 

ಸಂಸ್ಥೆಯ ಟ್ರಸ್ಟಿ ಸಿನಿಮಾ ನಿರ್ದೇಶಕ ಎಂ.ಎಸ್.ಸತ್ಯು, ‘ಚರಕ ಸಂಸ್ಥೆ 25 ವರ್ಷಗಳಿಂದ ಮತ್ತು ದೇಸಿ ಸಂಸ್ಥೆ 20 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಹತ್ತಿ ಉಡುಪುಗಳನ್ನು ಕಡಿಮೆ ದರದಲ್ಲಿ ಪೂರೈಸುತ್ತಿವೆ. ಕೈಮಗ್ಗ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು