ವಿಲವಿಲನೇ ಒದ್ದಾಡಿದರೂ ನೆರವಿಗೆ ಬರಲಿಲ್ಲ!

7
ಕಾಲು ಕಳೆದುಕೊಂಡು ರಸ್ತೆಯಲ್ಲಿ ನರಳಾಡಿದ ಮಹಿಳೆ; ತೀವ್ರ ರಕ್ತಸ್ರಾವದಿಂದ ಸಾವು

ವಿಲವಿಲನೇ ಒದ್ದಾಡಿದರೂ ನೆರವಿಗೆ ಬರಲಿಲ್ಲ!

Published:
Updated:

ವಿಜಯಪುರ: ಅಪಘಾತಕ್ಕೀಡಾಗಿ ರಸ್ತೆಯಲ್ಲಿ ವಿಲವಿಲನೇ ಒದ್ದಾಡುತ್ತಿದ್ದ ಮಹಿಳೆಯೊಬ್ಬರು, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಬುಧವಾರ ಮೃತಪಟ್ಟಿದ್ದಾರೆ.

ವಿಜಯಪುರದ ನಿಸಾರಮಡ್ಡಿ ನಿವಾಸಿ ಶಂಶಾದ್‌ ನದಾಫ (47) ಮೃತಪಟ್ಟ ಮಹಿಳೆ. ಶಂಶಾದ್‌ ಅವರು ಕೂಲಿ ಕೆಲಸಕ್ಕಾಗಿ, ನಗರದ ಬಸವೇಶ್ವರ ವೃತ್ತದ ಮಾರ್ಗವಾಗಿ ಬೆಳಿಗ್ಗೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಅವರಿಗೆ ಗುದ್ದಿದೆ. ಬಸ್ಸಿನ ಚಕ್ರಗಳು ಹರಿದು, ಅವರ ಎರಡೂ ಕಾಲುಗಳು ನಜ್ಜುಗುಜ್ಜಾಗಿವೆ. ತಕ್ಷಣವೇ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಸೇರಿದರಾದರೂ ಯಾರೊಬ್ಬರೂ ಅವರ ನೆರವಿಗೆ ಧಾವಿಸಿಲ್ಲ.

ವಿಷಯ ತಿಳಿದ ಸಂಚಾರ ಠಾಣೆಯ ಪೊಲೀಸ್‌ ಸಿಬ್ಬಂದಿಯೊಬ್ಬರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್‌ ಬಂದ ಬಳಿಕವಷ್ಟೇ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವಿನ ಅಂದಾಜು 20 ನಿಮಿಷದಲ್ಲಿ, ನೆರೆದವರು ಗಾಯಾಳುವಿನ ಯಾತನೆಯನ್ನು ನೋಡುತ್ತ ನಿಂತಿದ್ದರೇ ವಿನಾ ಆಸ್ಪತ್ರೆಗೆ ಸಾಗಿಸಲು ಮುಂದಾಗಲಿಲ್ಲ ಎಂದು ಸಂಚಾರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂ ಕಾಲು ಜಜ್ಜಿ ಹೋಗಿದ್ದರಿಂದ ಮಹಿಳೆ ತೀವ್ರ ರಕ್ತಸ್ರಾವದಿಂದ ಬಳಲಿದ್ದರು. ತಲೆಗೂ ತೀವ್ರ ಪೆಟ್ಟಾಗಿತ್ತು. ಅಗತ್ಯವಿರುವ ರಕ್ತಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮಧ್ಯಾಹ್ನ ಮೃತಪಟ್ಟರು’ ಎಂದು ಜಿಲ್ಲಾ ಸರ್ಜನ್‌ ಡಾ.ಮಹೇಂದ್ರ ಕಾಪಸೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !