ಅಮಿತಾಬ್‌ಗೆ ಹುಟ್ಟುಹಬ್ಬ ಸಂಭ್ರಮ:‘ಸೈರಾ ನರಸಿಂಹ ರೆಡ್ಡಿ’ ಫಸ್ಟ್‌ ಲುಕ್‌ ಬಿಡುಗಡೆ

7

ಅಮಿತಾಬ್‌ಗೆ ಹುಟ್ಟುಹಬ್ಬ ಸಂಭ್ರಮ:‘ಸೈರಾ ನರಸಿಂಹ ರೆಡ್ಡಿ’ ಫಸ್ಟ್‌ ಲುಕ್‌ ಬಿಡುಗಡೆ

Published:
Updated:

ಹೈದರಾಬಾದ್‌: ಬಾಲಿವುಡ್‌ ನಟ ಅಮಿತಾಬ್ ಬಚ್ಚನ್ ಅವರು ಗುರುವಾರ 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಅಮಿತಾಬ್‌ ಬಚ್ಚನ್‌ ಅವರ ಹುಟ್ಟುಹಬ್ಬದ ಅಂಗವಾಗಿ ಸುರೇಂದ್ರ ರೆಡ್ಡಿ ನಿರ್ದೇಶನದ ‘ಸೈರಾ ನರಸಿಂಹ ರೆಡ್ಡಿ’ ಬಹು ಭಾಷಾ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್‌ ಚಿರಂಜೀವಿ, ಕಿಚ್ಚ ಸುದೀಪ್‌, ನಟಿ ನಯನಾ ತಾರಾ, ತಮನ್ನಾ, ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ.

ಚಿರಂಜೀವಿ ಅವರ ಮಗ, ನಟ ರಾಮ್‌ ಚರಣ್‌ ಚಿತ್ರಕ್ಕೆ ಹಣ ಹೂಡಿದ್ದಾರೆ. 

ಅಮಿತಾಬ್‌ ಪಾತ್ರಕ್ಕೆ ಸಂಬಂಧಿಸಿ ಚಿತ್ರ ತಂಡ ಬುಧವಾರ ಯುಟ್ಯೂಬ್‌ನಲ್ಲಿ ಟೀಸರ್‌ವೊಂದನ್ನು ಬಿಡುಗಡೆ ಮಾಡಿದ್ದು, ಇವರೆಗೆ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಚಿತ್ರ ತೆಲುಗು, ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ...
ಬಾಲಿವುಡ್ ಬಿಗ್‌ಬಿ ಅಮಿತಾಬ್ ಬರ್ತ್‌ ಡೇ...ಶುಭ ಹಾರೈಸಿದ ಮೋದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !