ಒಂದೇ ದಿನ ಎರಡು ಪರೀಕ್ಷೆ!

7
ಗೊಂದಲದಲ್ಲಿ ಅಭ್ಯರ್ಥಿಗಳು

ಒಂದೇ ದಿನ ಎರಡು ಪರೀಕ್ಷೆ!

Published:
Updated:
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಸ್‌ಸಿ, ಎಸ್‌ಎಸ್ಟಿ ಸಮುದಾಯದ ಪದವೀಧರರಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿಗಾಗಿ ದೇಶದ ಪ್ರತಿಷ್ಠಿತ ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿ ಒದಗಿಸಲು ಸಮಾಜ ಕಲ್ಯಾಣ ಇಲಾಖೆಯು ಜುಲೈ 1ರಂದು ಪರೀಕ್ಷೆ ನಡೆಸಲಿದೆ. ಆದರೆ ಇದೇ ದಿನದಂದೇ ಭಾರತೀಯ ಆರ್ಥಿಕ ಸೇವಾ (ಐಇಎಸ್‌) ಪರೀಕ್ಷೆಯೂ ನಡೆಯಲಿದ್ದು, ಎರಡೂ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿ ಗಳನ್ನು ಗೊಂದಲಕ್ಕೆ ಸಿಲುಕಿಸಿದೆ.

ಯುಪಿಎಸ್‌ಸಿ ತನ್ನ ವರ್ಷದ ಪರೀಕ್ಷಾ ವೇಳಾಪಟ್ಟಿಯನ್ನು ವರ್ಷದ ಆರಂಭದಲ್ಲೇ ಪ್ರಕಟಿಸಿರುತ್ತದೆ. ಈ ದಿನಗಳಂದು ಇತರ ಪರೀಕ್ಷೆಗಳು ನಡೆಯದಂತೆ ನೋಡಿಕೊಳ್ಳಬೇಕಾದದ್ದು ವಿವಿಧ ಪರೀಕ್ಷಾ ಪ್ರಾಧಿಕಾರಗಳ ಕರ್ತವ್ಯ. ಆದರೆ ಎರಡೂ ಪರೀಕ್ಷೆಗಳು ಒಂದೇ ದಿನ ಬರುವಂತೆ ಮಾಡಿರುವುದು ಸರಿಯಲ್ಲ. ಇದರಿಂದ ಎರಡೂ ಪರೀಕ್ಷಾರ್ಥಿಗಳನ್ನು ಬರೆಯಬೇಕೆಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಶೀಲಿಸಿ ಕ್ರಮ: ಪ್ರಿಯಾಂಕ್‌ ಖರ್ಗೆ

‘ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ರಾಜ್ಯದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಆಗಬೆಕು ಎಂಬ ಉದ್ದೇಶದಿಂದಲೇ ಸಮಾಜ ಕಲ್ಯಾಣ ಇಲಾಖೆ ದೇಶದ ಪ್ರತಿಷ್ಠಿತ ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡುತ್ತಿದೆ. ಈ ಕುರಿತು ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗಿದೆ. ದಿನಾಂಕವನ್ನೂ ಅವರೇ ನಿಗದಿ ಮಾಡಿದ್ದಾರೆ. ಎರಡೂ ಪರೀಕ್ಷೆಗಳು ಒಂದೇ ದಿನ ಬರುತ್ತವೆಯಾ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಒಂದು ವೇಳೆ ಬರುವುದಿದ್ದರೆ ಯಾವ ಅಭ್ಯರ್ಥಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !