ಯೋಧರ ನಿಯೋಜನೆ ಹಿಂತೆಗೆದುಕೊಂಡ ಟ್ರಂಪ್‌

7

ಯೋಧರ ನಿಯೋಜನೆ ಹಿಂತೆಗೆದುಕೊಂಡ ಟ್ರಂಪ್‌

Published:
Updated:

ಬೈರೂತ್‌: ‘ಸಿರಿಯಾದಿಂದ ಅಮೆರಿಕ ಸೇನಾ ತುಕಡಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ವಕ್ತಾರ ಕರ್ನಾಲ್‌ ಸೀನ್‌ ರಯಾನ್‌ ಹೇಳಿದ್ದಾರೆ. 

ಜಿಹಾದಿ ನಿಗ್ರಹ ಪಡೆ ನಿಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

ಕಾರ್ಯಾಚರಣೆಯ ಸುರಕ್ಷತೆ ದೃಷ್ಟಿಯಿಂದ ಯಾವ ಸ್ಥಳದಿಂದ ಸೇನಾ ತುಕಡಿ ಹಿಂಪಡೆಯಲಾಗಿದೆ ಎಂಬ ಮಾಹಿತಿ, ಸಮಯ ಮತ್ತು ಯೋಧರ ಚಲನ ವಲನಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. 

‘ಹಸೇಕ್ ಪ್ರಾಂತ್ಯದ ರುಮಿಲಾನ್ ಮಿಲಿಟರಿ ನೆಲೆಯಿಂದ ಅಮೆರಿಕ ಸೇನಾ ಪಡೆಯನ್ನು ಗುರುವಾರ ಹಿಂತೆಗೆದುಕೊಳ್ಳಲಾಗಿದೆ’ ಎಂದು ಮಾನವಹಕ್ಕು ಆಯೋಗದ ಮುಖ್ಯಸ್ಥ ರಾಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ. 

ಸಿರಿಯಾದಲ್ಲಿ ನಿಯೋಜಿಸಲಾಗಿರುವ 2000 ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಡಿಸೆಂಬರ್‌ 19ರಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !