ವಚನಾಮೃತ...

7

ವಚನಾಮೃತ...

Published:
Updated:
Prajavani

–ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ವಿರಕ್ತಮಠ, ಆಲಮೇಲ

ನಾವೆಲ್ಲಾ ಭೂಮಿ ಮೇಲಿನ ಬಾಡಿಗೆದಾರರು..!

ಅರ್ಥಶಾಸ್ತ್ರದಲ್ಲಿ ಒಂದು ಸಿದ್ಧಾಂತವನ್ನು ಅರ್ಥಶಾಸ್ತ್ರಜ್ಞರು ಹೇಳುವರು. ಅದೇ ‘ಸೈಕಿಕಲ್ ಡಿಸ್ಟನ್ಸ್ ಥಿಯರಿ’. ಈ ವಿಚಾರವು ನಾವು ಬೆಂಕಿ ಕಾಯಿಸುವಾಗ, ಕೈಯನ್ನು ಅತಿ ಹತ್ತಿರ ಒಯ್ದರೆ ಶಾಖ ಹೆಚ್ಚು ತಗುಲಿ ಬೆಂಕಿಯ ಅನುಭವವಾಗುವುದು. ಅತಿ ದೂರ ಹಿಡಿದರೆ ಶಾಖ ಸ್ಪರ್ಶ ಹಿತವಾಗಿ ಅನುಭವಕ್ಕೆ ಬರುವುದು.

ನಾವೆಲ್ಲಾ ಈ ಭೂಮಿಯ ಮೇಲಿನ ಬಾಡಿಗೆದಾರರು. ನಾಟಕದಲ್ಲಿನ ಪಾತ್ರದಂತೆ ನಮ್ಮದು ಒಂದು ಪಾತ್ರ. ನಮ್ಮದು ಏನಿದ್ದರೂ ಪಾತ್ರ ಮಾತ್ರ. ಒಂದು ದಿನ ಈ ಭೂಮಿಯಿಂದ ನಿರ್ಗಮಿಸಲೇಬೇಕು. ಕಾರಣ ಈ ಬದುಕಿನಲ್ಲಿ ದುಃಖವಾಗಬಾರದು ಎಂದಿದ್ದರೇ, ಈ ಪ್ರಪಂಚಕ್ಕೆ ಅತಿ ಹತ್ತಿರವೂ, ಅತಿ ದೂರವೂ ಆಗಿರದೆ ಕೇವಲ ಸಾಕ್ಷಿಭೂತರಾಗಿದ್ದಾಗ ಮಾತ್ರ ಸುಖ ಎಂಬುದು ಸಿಗುವುದು.

ಇದನ್ನೇ ಬಸವಣ್ಣ

ಸಂಸಾರ ಎಂಬುದೊಂದು ಗಾಳಿಯ ಸೊಡರು
ಸಿರಿಯೆಂಬುದು ಸಂತೆಯ ಮಂದಿ
ಕಂಡೆಯ ಇದನೆಚ್ಚಿ ಕೆಡಬೇಡ ಬರಿದೆ
ಸಿರಿಯಂಬುವದ ಮರೆತು ನಮ್ಮ ಕೂಡಲ ಸಂಗನ ಮರೆಯದೆ ಪೂಜಿಸು... ಎಂದು ಹೇಳಿದ್ದಾರೆ.

ಈ ಪ್ರಪಂಚವನ್ನು ಬುದ್ಧ ಒದ್ದು ಗೆದ್ದರೆ, ಬಸವಣ್ಣ ಇದ್ದು ಗೆದ್ದ, ಗುಬ್ಬಿ ಬೇರೆಯವರ ಮನೆಯಲ್ಲಿ ವಾಸ ಮಾಡಿ ತನ್ನ ಮನೆ ಎಂದರೆ ದುಃಖವೇ ಅಲ್ಲವೇ, ಅಲ್ಲಿಂದ ಒಂದು ದಿನ ಬಿಟ್ಟು ಹೋಗಲೇ ಬೇಕು,ಈ ವಿಚಾರ ತಿಳಿದರೆ ನಮಗೆ ಯಾವುದರಿಂದ ದುಃಖವಾಗದು. ಇದೇ ಶರಣ ಮಾರ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !