ಶೀಘ್ರದಲ್ಲೇ ಹಿಂಗಾರು ಬೆಳೆ ಹಾನಿ ಸಮೀಕ್ಷೆ

7
ತಿಕೋಟಾದಲ್ಲಿ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿಕೆ

ಶೀಘ್ರದಲ್ಲೇ ಹಿಂಗಾರು ಬೆಳೆ ಹಾನಿ ಸಮೀಕ್ಷೆ

Published:
Updated:

ತಿಕೋಟಾ (ವಿಜಯಪುರ): ‘ಡಿಸೆಂಬರ್‌ ಅಂತ್ಯದವರೆಗೂ ಕೇಂದ್ರ ಸರ್ಕಾರದ ಮಾನದಂಡದಂತೆ ಹಿಂಗಾರು ಬೆಳೆ ಹಾನಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಜನವರಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಸಮೀಕ್ಷೆ ನಡೆಸಲು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವೆ’ ಎಂದು ಕೃಷಿ ಸಚಿವ ಎನ್.ಎಚ್‌.ಶಿವಶಂಕರ ರೆಡ್ಡಿ ತಿಳಿಸಿದರು.

‘ಮುಂಗಾರು ಬೆಳೆ ನಷ್ಟದಿಂದ ₹ 16000 ಕೋಟಿ ಹಾನಿಯಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಇದೂವರೆಗೂ ಪರಿಹಾರದ ಮೊತ್ತ ಬಂದಿಲ್ಲ. ಬರುತ್ತಿದ್ದಂತೆ ರೈತರಿಗೆ ನೀಡಲಿದ್ದೇವೆ’ ಎಂದು ಮಂಗಳವಾರ ಪತ್ರಕರ್ತರಿಗೆ ಹೇಳಿದರು.

ಪ್ರಧಾನಿ ಮೋದಿ ರಾಜ್ಯ ಸರ್ಕಾರದ ಸಾಲ ಮನ್ನಾ ಬಗ್ಗೆ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ರೆಡ್ಡಿ, ‘ಸಾಲ ಮನ್ನಾ ಯೋಜನೆ ಲಾಲಿಪಪ್ಪ್‌ ಅಲ್ಲ. ರೈತರಿಗೆ ವರದಾನವಾಗಿದೆ. ಈಗಾಗಲೇ ರಾಜ್ಯದ 60000 ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಮ್ಮನ್ನೇ ಉತ್ತರ ಭಾರತದ ಕೆಲ ರಾಜ್ಯ ಸರ್ಕಾರಗಳು ಅನುಸರಿಸುತ್ತಿದ್ದು, ಇದೊಂದು ಜನಪ್ರಿಯ ಯೋಜನೆಯಾಗಿದೆ. ಇದನ್ನು ಸಹಿಸಲಾಗದೆ ಬಿಜೆಪಿಯವರು ವಿನಾಃ ಕಾರಣ ಟೀಕೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೃಷಿ ಯಂತ್ರಧಾರೆ ಯೋಜನೆ ಬಗ್ಗೆ ವಿವಿಧೆಡೆ ಅಪಸ್ವರ ಕೇಳಿ ಬಂದಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ರಾಜ್ಯದ ಎಲ್ಲೆಡೆಯೂ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಿಭಾಯಿಸುವಂತೆ ಸಂಸ್ಥೆಗೆ ಕೋರಲಾಗಿದೆ. ಈ ನಿಟ್ಟಿನಲ್ಲಿ ಚರ್ಚೆಯೂ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ರೆಡ್ಡಿ ಉತ್ತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !