ಸಿರಿಯಾ: ಅಪಹೃತರ ವಿಡಿಯೊ ಬಿಡುಗಡೆ

7

ಸಿರಿಯಾ: ಅಪಹೃತರ ವಿಡಿಯೊ ಬಿಡುಗಡೆ

Published:
Updated:

ವಾಷಿಂಗ್ಟನ್: ಜಪಾನ್‌ನ ಪತ್ರಕರ್ತ ಜಂಪಿ ಯಸುದಾ ಹಾಗೂ ಇಟಲಿಯ ನಾಗರಿಕ ಅಲೆಸಂಡ್ರೋ ಅವರನ್ನು ಅಪಹರಿಸಿರುವ ಸಿರಿಯಾದ ಜಿಹಾದಿಗಳು, ಅವರ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಅಪಹೃತರು ತಮ್ಮ ಬಿಡುಗಡೆಗೆ ಮನವಿ ಮಾಡುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. 

ಎಸ್‌ಐಟಿಇ ಸಂಸ್ಥೆಯು ವಿಡಿಯೊಗಳನ್ನು ಬಿಡುಗಡೆ ಮಾಡಿದೆ. ಆದರೆ ಯಾವ ಸಂಘಟನೆಯು ಅಪಹರಣ ಮಾಡಿದೆ ಎಂದು ತಿಳಿಸಿಲ್ಲ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿರುವ ಅಪಹೃತರು ಗೋಡೆಯ ಮುಂದೆ ಮಂಡಿಯೂರಿ ಕುಳಿತಿರುವ ದೃಶ್ಯವಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಇವರಿಗೆ ಕಾವಲಿದ್ದಾರೆ. 

ತಾವು ಅಲ್ ನುಸ್ರಾ ಸಂಘಟನೆಯಿಂದ ಅಪಹರಣಕ್ಕೆ ಒಳಗಾಗಿರಬಹುದು ಎಂದು ಜಂಪಿ ಹೇಳಿದ್ದಾರೆ. ತಾವು ಕೊರಿಯನ್ ಎಂದು ಪರಿಚಿಯಿಸಿಕೊಳ್ಳುವ ಇವರು ಜಪಾನ್ ಭಾಷೆಯಲ್ಲಿ ಮಾತನಾಡಿದ್ದಾರೆ. 2015ರಲ್ಲಿ ಇವರ ಅಪಹರಣವಾಗಿತ್ತು. 

ಇಟಲಿ ಸರ್ಕಾರಕ್ಕೆ ಇದು ತಮ್ಮ ಕಡೆಯ ಮನವಿ ಎಂದು ಅಲೆಸಂಡ್ರೋ ಅವರು ಹೇಳಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಟರ್ಕಿಯಲ್ಲಿ ಇವರನ್ನು ಅಪಹರಿಸಿ ಬಳಿಕ ಸಿರಿಯಾಗೆ ಕರೆತರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !