ವಿವೇಕಾನಂದ ಜಯಂತಿ

7

ವಿವೇಕಾನಂದ ಜಯಂತಿ

Published:
Updated:
Prajavani

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪ ರಾಷ್ಟ್ರೀಯ ಯುವ ದಿನ ಅಂಗವಾಗಿ ದಾಸರಹಳ್ಳಿ ಯುವಮೋರ್ಚಾ ಹಾಗೂ ಭಾರತ ಯುವಕೇಂದ್ರದ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಬಿಜೆಪಿಯ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿದರು.

ಮೋರ್ಚಾ ಅಧ್ಯಕ್ಷ ಸತೀಶ್ ಮಾತನಾಡಿ, 'ವಿವೇಕಾನಂದರ ಸಮನ್ವಯ ಸಂದೇಶವು ಜಗತ್ತಿನ ಮೂಲೆಮೂಲೆಗಳಲ್ಲಿ ಇಂದಿಗೂ ಮೊಳಗುತ್ತಿದೆ' ಎಂದರು.

ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸುರೇಶ್, 'ವಿವೇಕಾನಂದರು ಹಿಂದೂ ಧರ್ಮ ಹಾಗೂ ಭಾರತವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕು' ಎಂದರು.

ಭಾರತ ಯುವಕೇಂದ್ರ ಅಧ್ಯಕ್ಷ ವಿನೋದ್‌ಗೌಡ, 'ನಮ್ಮ ದೇಶವನ್ನು ಬದಲಾವಣೆ ಮಾಡಬೇಕಾದರೆ ಯುವಕರಿಂದ ಮಾತ್ರ ಸಾಧ್ಯ. ಭಾರತೀಯ ಸಮಾಜಕ್ಕೆ ಶಕ್ತಿಕೊಟ್ಟು ಅನೇಕ ಆದರ್ಶವಾದ ನುಡಿಗಳನ್ನು ಬಿಟ್ಟು ಹೋಗಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !