ವಿಜಯಪುರ: 1,74,395 ಮತದಾರರ ಹೆಚ್ಚಳ..!

ಶನಿವಾರ, ಏಪ್ರಿಲ್ 20, 2019
29 °C
ಲೋಕಸಭಾ ಚುನಾವಣೆ: 17,95,931 ಮತದಾರರಿಗೆ ಮತದಾನದ ಹಕ್ಕು

ವಿಜಯಪುರ: 1,74,395 ಮತದಾರರ ಹೆಚ್ಚಳ..!

Published:
Updated:

ವಿಜಯಪುರ: ಲೋಕಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಏ.23ರ ಮಂಗಳವಾರ ನಡೆಯಲಿರುವ ಮತದಾನದಲ್ಲಿ ಜಿಲ್ಲೆಯ 17,95,931 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ 8,46,929 ಪುರುಷ ಮತದಾರರಿದ್ದರೆ, 7,74,430 ಮಹಿಳಾ ಮತದಾರರು, 177 ಇತರೆ ಮತದಾರರು ಸೇರಿ ಒಟ್ಟು 16,21,536 ಮತದಾರರಿದ್ದರು.

ಈ ಐದು ವರ್ಷದ ಅವಧಿಯಲ್ಲಿ 74,329 ಪುರುಷ ಮತದಾರರು, 99,974 ಮಹಿಳಾ ಮತದಾರರು ಸೇರಿದಂತೆ, 92 ಇತರೆ ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆಯಲ್ಲಿ 1,74,395 ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ. ಈ ಹೆಚ್ಚಳದಲ್ಲಿ ಪುರುಷ ಮತದಾರರಿಗಿಂತ, ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ.

ಪ್ರಸಕ್ತ ಚುನಾವಣೆಯಲ್ಲಿ 9,21,258 ಪುರುಷರು, 8,74,404 ಮಹಿಳೆಯರು, 269 ಇತರೆ ಮತದಾರರು ಸೇರಿದಂತೆ ಒಟ್ಟು 17,95,931 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಸರ್ವೀಸ್‌ ವೋಟರ್ಸ್‌ನ ಮಾಹಿತಿ ಲಭ್ಯವಾಗಿಲ್ಲ.

ಕ್ಷೇತ್ರ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರ ಸಂಖ್ಯೆಯೂ ಸಾಕಷ್ಟಿದ್ದು, ತಮ್ಮ ಹಕ್ಕು ಚಲಾಯಿಸಲು ಉತ್ಸಾಹದಿಂದಿರುವ ಮತದಾರರ ಸಂಖ್ಯೆಯೇ ಹೆಚ್ಚಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ನೂತನ ಮತದಾರರಿದ್ದು, ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಖಾಡದಲ್ಲಿರುವ ಅಭ್ಯರ್ಥಿಗಳು, ಬೆಂಬಲಿಗರು ಸಹ ಇವರನ್ನೇ ತಮ್ಮ ಮತ ಬ್ಯಾಂಕ್‌ ಮಾಡಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದಾರೆ. ಹೊಸ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆ: 17,92,217 ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ 9,19,875 ಪುರುಷರು, 8,70,976 ಮಹಿಳೆಯರು, 233 ಇತರೆ ಮತದಾರರು, 1133 ಇತರೆ ಮತದಾರರು ಸೇರಿದಂತೆ ಒಟ್ಟು 17,92,217 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.

ವರ್ಷದ ಬಳಿಕ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ 17,95,931 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ವರ್ಷದ ಅವಧಿಯಲ್ಲಿ ಕೇವಲ 3,714 ಮತದಾರರ ಸೇರ್ಪಡೆಯಾಗಿದೆ. ಮತದಾರರ ಪಟ್ಟಿಯಿಂದ ತಮ್ಮ ಮತವನ್ನು ಬೇರೆಡೆ ವರ್ಗಾಯಿಸಿಕೊಂಡವರ ಮಾಹಿತಿ ಚುನಾವಣಾ ಆಯೋಗದ ಜಿಲ್ಲಾ ಕಚೇರಿಯಲ್ಲಿ ಲಭ್ಯವಾಗದಾಗಿದೆ.

ಪ್ರತಿ ಕ್ಷೇತ್ರದಲ್ಲೂ 2 ಲಕ್ಷ ಮತದಾರರು

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತದಾರರ ಸಂಖ್ಯೆ ಇದೀಗ ಎರಡು ಲಕ್ಷ ದಾಟಿದೆ. ನಾಗಠಾಣ ಪರಿಶಿಷ್ಟ ಜಾತಿಯ ಮೀಸಲು ವಿಧಾನಸಭಾ ಕ್ಷೇತ್ರ ಅತ್ಯಂತ ಹೆಚ್ಚು ಮತದಾರರನ್ನು ಹೊಂದಿದೆ. ಬಸವನಬಾಗೇವಾಡಿ ಕಡಿಮೆ ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !