ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಭಾನುವಾರ, ಮೇ 26, 2019
27 °C

ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

Published:
Updated:
Prajavani

ವಿಜಯಪುರ: ಹಣಮಾಪುರ ಜಾಕ್‌ವೆಲ್‌ನಿಂದ ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ, ರೈತರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಅರ್ಪಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಈ ಹಿಂದೆ ನೀರು ಹರಿಸಲಾಗಿದ್ದರೂ; 80 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯಲ್ಲಿ ಕೇವಲ 40 ಕಿ.ಮೀ.ವರೆಗೆ ಮಾತ್ರ ನೀರು ಹರಿದಿದೆ. ಮುಂದಿನ 40 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 20 ಗ್ರಾಮಗಳಿದ್ದು, ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ.

ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆಯಿರುವ ಈ ಸಂದರ್ಭದಲ್ಲಿ ಪಶ್ಚಿಮ ಕಾಲುವೆಯ ಕೊನೆ ಹಳ್ಳಿಯವರೆಗೂ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎಂದು ರೈತ ಮುಖಂಡ ಡಾ.ಕೆ.ಎಚ್.ಮುಂಬಾರೆಡ್ಡಿ ಜಿಲ್ಲಾಧಿಕಾರಿಗೆ ವಿನಂತಿಸಿದರು.

ಕಂಬಾಗಿ, ಬೋಳಚಿಕ್ಕಲಕಿ, ನಂದ್ಯಾಳ, ಕಾತ್ರಾಳ, ಗುಣದಾಳ, ಸಂಗಾಪುರ, ಹಣಮಸಾಗರ ಗ್ರಾಮಗಳ ಪರವಾಗಿ ಉಮೇಶ ಮಲ್ಲಣ್ಣವರ, ರಮೇಶ ಬಡ್ರಿ, ಮಲ್ಲು ದಳವಾಯಿ, ಮಹಾದೇವಪ್ಪ ಮದರಖಂಡಿ, ಗಿರಿಮಲ್ಲಪ್ಪ ಮಠಪತಿ, ರಾಮನಿಂಗ ಕೊಕಟನೂರ ಸೇರಿದಂತೆ ಹಲವು ರೈತರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ನಿಮ್ಮ ಮನವಿಯನ್ನು ರವಾನಿಸಿ, ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !