ಫೆ. 21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್

ಬೆಂಗಳೂರು: 2021ರ 'ಮಿಸೆಸ್ ಸೌತ್ ಇಂಡಿಯಾ ಐಯಾಮ್ ಪವರ್ಫುಲ್' ಸ್ಪರ್ಧೆಗೆ ಫೆಬ್ರುವರಿ 21ರಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶಾಂಘ್ರಿಲಾ ಹೋಟೆಲ್ನಲ್ಲಿ ಆಡಿಷನ್ ಯೋಜಿಸಲಾಗಿದೆ.
ಸ್ಪರ್ಧೆಯನ್ನು ನಂದಿನಿ ನಾಗರಾಜ್ ಎಂಬುವವರು ಆಯೋಜಿಸಿದ್ದಾರೆ. ಆಡಿಷನ್ನಲ್ಲಿ 18ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಆಯ್ಕೆಯಾದವರು 'ಮಿಸೆಸ್ ಸೌತ್ ಇಂಡಿಯಾ ಐಯಾಮ್ ಪವರ್ಫುಲ್' ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಹೆಸರು ನೋಂದಾಯಿಸಲು 9901755163 ಗೆ ಕರೆ ಮಾಡಬಹುದು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.