ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಹೋರಾಟ: 80 ಪಟ್ಟಣಗಳಿಗೆ ವ್ಯಾಪಿಸಿದ ಪ್ರತಿಭಟನೆ

ಮೃತರ ಸಂಖ್ಯೆ 35ಕ್ಕೆ ಏರಿಕೆ
Last Updated 24 ಸೆಪ್ಟೆಂಬರ್ 2022, 17:56 IST
ಅಕ್ಷರ ಗಾತ್ರ

ಟೆಹರಾನ್‌: ಹಿಜಾಬ್‌ ವಿರೋಧಿ ಹೋರಾಟವು ಇರಾನ್‌ನಲ್ಲಿ ಇನ್ನಷ್ಟು ತೀವ್ರಗೊಂಡಿದ್ದು, 80ಕ್ಕೂ ನಗರ, ಪಟ್ಟಣಗಳಿಗೆ ‌ವ್ಯಾಪಿಸಿದೆ. ಸಾವಿರಾರು ಮಹಿಳೆಯರು ಬೀದಿಗಿಳಿದಿದ್ದಾರೆ.ಒಂದು ವಾರದಲ್ಲಿ 35 ಮಂದಿ ಪ್ರತಿಭಟನಾನಿರತರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಬೋರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರತಿಭಟನಕಾರರು ಇಸ್ಲಾಮಿಕ್ ಆಡಳಿತ ಮತ್ತು ಅದರ ಪ್ರಮುಖ ನಾಯಕ ಆಯತ್‌ಉಲ್ಲಾ ಅಲಿ ಖಮೇನಿ ಅವರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಘೋಷಣೆಗಳನ್ನು ಕೂಗಿದರು.

ಶನಿವಾರ ಇಲ್ಲಿನ ಮಾಶಾದ್, ಖುಚಾನ್, ಶಿರಾಜ್, ತಬ್ರೀಜ್ ಮತ್ತು ಕರಜ್‌ನಲ್ಲಿ ನಡೆದ ಸಂಘರ್ಷದಲ್ಲಿ ಐವರು ಭದ್ರತಾ ಸಿಬ್ಬಂದಿ ಕೂಡಾ ಮೃತಪಟ್ಟಿದ್ದಾರೆ. ಇಸ್ಲಾಮಿಕ್‌ ರಾಷ್ಟ್ರದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಆಡಳಿತದ ಧೋರಣೆಯ ವಿರುದ್ಧದ ಆಕ್ರೋಶ ಮಹಿಳೆ ಆಮೀನಿ ಸಾವಿನೊಂದಿಗೆ ಸ್ಫೋಟಗೊಂಡಿದೆ.

ಇರಾನ್‌ನಲ್ಲಿ ಹಿಜಾಬ್‌ ಧರಿಸುವ ಕುರಿತು ಕಟ್ಟುನಿಟ್ಟಿನ ನಿಯಮವಿದೆ. ಹಿಜಾಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 24 ವರ್ಷದ ಕುರ್ದಿಷ್‌ ಮಹಿಳೆ ಮಾಸಾ ಆಮೀನಿ ಅವರನ್ನು ನೈತಿಕ ಪೊಲೀಸರು ಠಾಣೆಗೆ ಒಯ್ದಿದ್ದರು. ಠಾಣೆಯಲ್ಲಿ ಪ್ರಜ್ಞಾಹೀನರಾಗಿದ್ದ ಆಕೆ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರ ಹಲ್ಲೆ ಕಾರಣ ಎನ್ನಲಾಗಿದೆ.

ಇದರ ಹಿಂದೇ ಹಿಜಾಬ್‌ ಧರಿಸುವುದರ ಕುರಿತಂತೆ ಸರ್ಕಾರದ ಕಟ್ಟುಪಾಡು ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದು, ಬೀದಿಗಳಲ್ಲೇ ಹಿಜಾಬ್‌ಗೆ ಬೆಂಕಿ ಹಾಕಿದ್ದಾರೆ. ಇನ್ನೊಂದೆಡೆ ಪುರುಷ ಪ್ರತಿಭಟನಕಾರರು ಇಸ್ಲಾಮಿಕ್‌ ಸ್ಟೇಟ್‌ನ ಪ್ರಮುಖ ನಾಯಕನ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT