7

ಮನರಂಜಿಸಿದ ‘ಭಸ್ಮಾಸುರ ಮೋಹಿನಿ’

Published:
Updated:

ಭಸ್ಮಾಸುರನ ಆರ್ಭಟ, ಈಶ್ವರನ ಪೀಕಲಾಟ, ವೀರಭದ್ರನ ಹೋರಾಟ, ಮೇನಕೆಯ ವಯ್ಯಾರ ಇವೆಲ್ಲವೂ ಕಂಡುಬಂದದ್ದು  ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನದಲ್ಲಿ!

ನಗರದ ಜಾಲಹಳ್ಳಿಯ ಸಮೀಪದ ರಾಮಚಂದ್ರಾಪುರ ಸಪ್ತಮಾತ್ರಕೆಯರ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಮಾಸದ ಮೆಲುಕು-85 ಕಾರ್ಯಕ್ರಮದಲ್ಲಿ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು. 

ಈಶ್ವರ ಚೆಲ್ಲಿದ ಭಸ್ಮದಿಂದ ಉದ್ಭವಗೊಂಡ ಭಸ್ಮಾಸುರ ಉರಿ ಹಸ್ತದ ಶಕ್ತಿ ಪಡೆದು ಭೂಲೋಕದಲ್ಲಿನ ಬ್ರಾಹ್ಮಣ ಹಾಗೂ ಗರ್ಭಿಣಿ ಸ್ತ್ರೀಯರನ್ನು ದಹಿಸುತ್ತಾ ದೇವಲೋಕಕ್ಕೂ ದಾಳಿ ಇಡುತ್ತಾನೆ. ದೇವಲೋಕದ ದೇವಾನು ದೇವತೆಗಳೆಲ್ಲಾ ಹೆದರಿ ವಿಷ್ಣುವಿನ ಮೊರೆ ಹೋದಾಗ ವಿಷ್ಣು ಈಶ್ವರನನ್ನು ಪ್ರಶ್ನಿಸುತ್ತಾನೆ. ಎಲ್ಲವನ್ನು ಆಲಿಸಿದ ಈಶ್ವರ ಕೋಪಗೊಂಡು ಭಸ್ಮಾಸುರನನ್ನು ವಧಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಈಶ್ವರ ಭಸ್ಮಾಸುರನ ಅಟ್ಟಹಾಸವನ್ನು ಹಿಮ್ಮೆಟ್ಟಿಸುವಲ್ಲಿ ಸೋತು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾನೆ. ವಿಷ್ಣುವು ಮೋಹಿನಿಯ ವೇಷ ಧರಿಸಿ ತನ್ನನ್ನು ಮೋಹಿಸಲು ಬಂದ ಭಸ್ಮಾಸುರನನ್ನು ನೃತ್ಯದ ಮೂಲಕ ಅವನ ಕೈ ಅವನ ತಲೆಯ ಮೇಲೆ ಇಡುವಂತೆ ಮಾಡಿ ಭಸ್ಮಾಸುರನನ್ನು ದಹಿಸುತ್ತಾಳೆ. ಈ  ಪ್ರಸಂಗವನ್ನು ಕಲಾಕದಂಬ ಆರ್ಟ್ ಸೆಂಟರ್ ಕಲಾವಿದರು ಮನ ಮುಟ್ಟುವಂತೆ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು.

ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಬಾರ್ ಹಾಗೂ ವಿನಯ್ ಶೆಟ್ಟಿಯವರ ದ್ವಂದ್ವ ಭಾಗವತಿಕೆ, ಸಂಪತ್ ಕುಮಾರ್‌ ಅವರ ಮದ್ದಲೆಯ ಮೋಡಿ, ನರಸಿಂಹಾಚಾರ್ ಅವರ ಅಬ್ಬರದ ಚಂಡೆ ಪ್ರಸಂಗಕ್ಕೆ ಕಳೆ ತಂದುಕೊಟ್ಟಿತು. ಮುಮ್ಮೇಳದಲ್ಲಿ ಡಾ.ರಾಧಾಕೃಷ್ಣ ಉರಾಳ–ಮೇನಕೆ, ಭರತ್ ಗೌಡ–ಭಸ್ಮಾಸುರ, ಸುರೇಶ ತಂತ್ರಾಡಿ–ಕೃಷ್ಣ, ಶ್ರೀಧರ ತಂತ್ರಾಡಿ–ಈಶ್ವರ,ವಾಸುದೇವ ಹೆಗಡೆ–ಪಾರ್ವತಿ, ನಿತ್ಯಾನಂದ ನಾಯಕ್‍–ದೇವೇಂದ್ರ, ಅನಂತ ಕುಮಾರ್–ವೀರಭದ್ರ, ದೇವರಾಜ ಕರಬ–ಬ್ರಾಹ್ಮಣ ಹಾಗೂ ವಸಂತ–ಮಾಣಿ ಪಾತ್ರಗಳು ನೆರೆದ ಪ್ರೇಕ್ಷಕರ ಮನರಂಜಿಸಿತು.


ಯಕ್ಷಗಾನ ಕಲಾವಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !