ಎಎಪಿಯಿಂದ ‘ಯೂತ್ ಕೌನ್ಸಿಲರ್’ ಅಭಿಯಾನ

7

ಎಎಪಿಯಿಂದ ‘ಯೂತ್ ಕೌನ್ಸಿಲರ್’ ಅಭಿಯಾನ

Published:
Updated:

ಬೆಂಗಳೂರು: ಆಮ್ ಆದ್ಮಿ ಪಕ್ಷದ ನಗರ ಘಟಕ, ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ, 35 ವರ್ಷದೊಳಗಿನ ಯುವಜನತೆಗಾಗಿ ನಗರದ 198 ವಾರ್ಡ್‌ಗಳಲ್ಲಿ ‘ಯೂತ್ ಕೌನ್ಸಿಲರ್’ ಎಂಬ ವಿಶಿಷ್ಟ ಅಭಿಯಾನವನ್ನು ಏರ್ಪಡಿಸಿದೆ.

ಎಎಪಿ ಬೆಂಗಳೂರು ಪ್ರಚಾರ ಸಮಿತಿ ಸದಸ್ಯೆ ಶಾಂತಲಾ ದಾಮ್ಲೆ, ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

‘ಬಿಬಿಎಂಪಿಯನ್ನು ಸರಿದಾರಿಗೆ ತರುವಲ್ಲಿ ಯೂತ್ ಕೌನ್ಸಿಲರ್‌ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರತಿ ವಾರ್ಡಿಗೆ ಒಬ್ಬ
ರಂತೆ ಯೂತ್ ಕೌನ್ಸಿಲರ್‌ ನೇಮಕ ಮಾಡಲಾಗುತ್ತದೆ. ಈಗಾಗಲೇ ಶಾಂತಲಾನಗರ ವಾರ್ಡ್, ಬಾಣಸವಾಡಿ, ಈಜೀಪುರ, ಹೊರ
ಮಾವು, ಹಾಗೂ ಬಸವನಗುಡಿ ವಾರ್ಡ್‌ಗಳಿಗೆ ಯೂತ್ ಕೌನ್ಸಿಲರ್‌ಗಳ ನೇಮಕ ಮಾಡಲಾಗಿದೆ’ ಎಂದು ಹೇಳಿದರು.

ಯೂತ್ ಕೌನ್ಸಿಲರ್ ಆಗಿ ನೇಮಕಗೊಳ್ಳಲು ಇಚ್ಛೆ ಇರುವವರು 8884431214 ಸಂಪರ್ಕಿಸಬಹುದು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !