ಸುವರ್ಣಾವತಿ ನದಿಯಲ್ಲಿ ಮುಳುಗಿ ಯುವಕ ಸಾವು

ಸೋಮವಾರ, ಮೇ 27, 2019
24 °C

ಸುವರ್ಣಾವತಿ ನದಿಯಲ್ಲಿ ಮುಳುಗಿ ಯುವಕ ಸಾವು

Published:
Updated:

ಚಾಮರಾಜನಗರ: ಸುವರ್ಣಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದ್ದಿದ್ದ ಯುವಕ ನೀರಿನಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾರೆ.

ನಗರದ ಸಮೀಪದ ರಾಮಸಮುದ್ರದ ನಿವಾಸಿ ಮಹದೇವಯ್ಯ ಅವರ ಮಗ ಸಚಿನ್‌ (20) ಮೃತಪಟ್ಟ ಯುವಕ.

ಮೂಲತಃ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದವರಾದ ಸಚಿನ್‌, ಜಾಲಹುಂಡಿಯಲ್ಲಿರುವ ಹೀರೊ ದ್ವಿಚಕ್ರ ವಾಹನಗಳ ಶೋ ರೂಂನಲ್ಲಿ ನೌಕರರಾಗಿದ್ದರು.

‘ಸ್ನೇಹಿತನ ಹುಟ್ಟುಹಬ್ಬ ಆಚರಣೆಗಾಗಿ ಸುವರ್ಣಾವತಿ ನದಿಗೆ ತೆರಳಿದ್ದರು. ಮಧ್ಯಾಹ್ನ ಊಟ ಮಾಡಿದ ನಂತರ ಸ್ನಾನ ಮಾಡುವುದಕ್ಕಾಗಿ ಸಚಿನ್‌ ನೀರಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ರಾಮಸಮುದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪು‌ಟ್ಟಸ್ವಾಮಿ ತಿಳಿಸಿದ್ದಾರೆ.

ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !