ಚರ್ಚೆ ಮೂಲಕ ಪರಿಹಾರ ಸಾಧ್ಯ ಚೀನಾ

ಬುಧವಾರ, ಮಾರ್ಚ್ 27, 2019
26 °C
ಮಸೂದ್‌ ಅಜರ್‌ ನಿಷೇಧ ಪ್ರಸ್ತಾವ

ಚರ್ಚೆ ಮೂಲಕ ಪರಿಹಾರ ಸಾಧ್ಯ ಚೀನಾ

Published:
Updated:

ಬೀಜಿಂಗ್‌: ಜೈಷ್‌ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವ ಮಾರ್ಚ್‌ 13ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದೆ ಬರಲಿದ್ದು, ಚರ್ಚೆ ಮೂಲಕ ಮಾತ್ರವೇ ‘ಜವಾಬ್ದಾರಿಯುತ ಪರಿಹಾರ’ ದೊರಕಬಹುದು ಎಂದು ಚೀನಾ ತಿಳಿಸಿದೆ. 

ಪುಲ್ವಾಮಾ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಈ ವಿಷಯ ಚರ್ಚಿಸುವುದು ಮಹತ್ವದ್ದಾಗಿದೆ ಎಂದು ಬೀಜಿಂಗ್‌ ತಿಳಿಸಿದೆ.

ಜೈಷ್‌ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ ವಿಶ್ವಸಂಸ್ಥೆಗೆ ಪ್ರಸ್ತಾವ ಸಲ್ಲಿಸಿವೆ. ಹಿಂದೆ ಮೂರು ಬಾರಿಯೂ ಈ ಪ್ರಸ್ತಾವವನ್ನು ಚೀನಾ ತಿರಸ್ಕರಿಸಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !