ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಭಾರತಕ್ಕೆ 5 ಚಿನ್ನ, 9 ಬೆಳ್ಳಿ

Published 6 ಮೇ 2024, 16:31 IST
Last Updated 6 ಮೇ 2024, 16:31 IST
ಅಕ್ಷರ ಗಾತ್ರ

ಅಸ್ತಾನಾ, ಕಜಕಸ್ತಾನ: ಭಾರತದ ಬಾಕ್ಸರ್‌ಗಳಾದ ಬ್ರಿಜೇಶ್ ತಮ್ಟಾ, ಆರ್ಯನ್ ಹೂಡಾ, ಯಶವರ್ಧನ್ ಸಿಂಗ್, ಲಕ್ಷ್ಮಿ ಮತ್ತು ನಿಶಾ ಅವರು ಎಎಸ್‌ಬಿಸಿ ಏಷ್ಯಾ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಯುವ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಸೋಮವಾರ ನಡೆದ ಪುರುಷರ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಬ್ರಿಜೇಶ್‌ 5–0 ಅಂತರದಿಂದ ತಜಕಿಸ್ತಾನದ ಮುಮಿನೋವ್ ಮುಯಿನ್‌ಖೋಡ್ಜಾ ಮಣಿಸಿ, ಭಾರತಕ್ಕೆ ಟೂರ್ನಿಯ ಮೊದಲ ಚಿನ್ನವನ್ನು ತಂದುಕೊಟ್ಟರು.

51 ಕೆ.ಜಿ ವಿಭಾಗದಲ್ಲಿ ಆರ್ಯನ್‌ ಅದೇ ರೀತಿಯ ಪ್ರಾಬಲ್ಯ ಪ್ರದರ್ಶಿಸಿದರು. ಅವರು 5–0 ಯಿಂದ ಕಿರ್ಗಿಸ್ತಾನದ ಕಮಿಲೋವ್ ಜಾಫರ್ಬೆಕ್ ವಿರುದ್ಧ ಜಯ ಸಾಧಿಸಿದರು. 63.5 ಕೆ.ಜಿ ವಿಭಾಗದಲ್ಲಿ ಯಶವರ್ಧನ್ ಸಿಂಗ್ 4–1ರಿಂದ ತಜಕಿಸ್ತಾನದ ಗಫುರೊವ್ ರುಸ್ಲಾನ್ ಅವರನ್ನು ಹಿಮ್ಮೆಟ್ಟಿಸಿದರು.

ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ಹಾಲಿ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಶಾ 5–0 ಸರ್ವಾನುಮತದ ತೀರ್ಪಿನ ಮೂಲಕ ಕಜಕಿಸ್ತಾನದ ಓಟಿನ್‌ಬೇ ಬಾಗ್ಜಾನ್ ಅವರನ್ನು ಸೋಲಿಸಿದರು. 50 ಕೆ.ಜಿ ವಿಭಾಗದಲ್ಲಿ ಲಕ್ಷ್ಮಿ ಭಾರತಕ್ಕೆ ಐದನೇ ಚಿನ್ನವನ್ನು ತಂದುಕೊಂಟ್ಟರು. ಅವರು ಮಂಗೋಲಿಯಾದ ಎಂಖ್ ನೊಮುಂಡರಿ ವಿರುದ್ಧ ಜಯ ಸಾಧಿಸಿದರು.

ಭಾರತದ 9 ಬಾಕ್ಸರ್‌ಗಳು ಬೆಳ್ಳಿ ಪದಕದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದರು. ಸಾಗರ್ ಜಾಖರ್ (60 ಕೆ.ಜಿ), ಪ್ರಿಯಾಂಶು (71 ಕೆ.ಜಿ), ರಾಹುಲ್ ಕುಂದು (75 ಕೆ.ಜಿ), ಆರ್ಯನ್ (92 ಕೆ.ಜಿ), ತಮನ್ನಾ (54 ಕೆ.ಜಿ), ನಿಕಿತಾ ಚಂದ್ (60 ಕೆ.ಜಿ), ಸೃಷ್ಟಿ ಸಾಥೆ (63 ಕೆ.ಜಿ), ರುದ್ರಿಕಾ (75 ಕೆ.ಜಿ) ಮತ್ತು ಖುಷಿ ಪೂನಿಯಾ (81 ಕೆಜಿ) ತಮ್ಮ ವಿಭಾಗಗಳ ಫೈನಲ್‌ನಲ್ಲಿ ಪರಾಭವಗೊಂಡರು.

ಮುಸ್ಕಾನ್ (75 ಕೆ.ಜಿ) ಮತ್ತು ಅಲ್ಫಿಯಾ ಪಠಾಣ್ (81 ಕೆ.ಜಿ) ಅವರು ತಮ್ಮ ವಿಭಾಗಗಳ ಸೆಮಿಫೈನಲ್‌ಗಳಲ್ಲಿ ಬೈ ಪಡೆದು ಫೈನಲ್‌ ಪ್ರವೇಶಿಸಿದರು.

ಎಂಟು ಮಹಿಳೆಯರು ಸೇರಿದಂತೆ ಭಾರತದ 12 ಬಾಕ್ಸರ್‌ಗಳು ಮಂಗಳವಾರ 22 ವರ್ಷದೊಳಗಿನವರ ಫೈನಲ್‌ನಲ್ಲಿ ಸೆಣಸಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT