ದಾಖಲೆ ಇಲ್ಲದ ₹1.99 ಲಕ್ಷ ನಗದು ವಶ

ಬುಧವಾರ, ಏಪ್ರಿಲ್ 24, 2019
28 °C

ದಾಖಲೆ ಇಲ್ಲದ ₹1.99 ಲಕ್ಷ ನಗದು ವಶ

Published:
Updated:

ಚಾಮರಾಜನಗರ: ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹1,00,510 ಮತ್ತು ₹98,890 ನಗದು ಹಣವನ್ನು ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮಲಾಪುರ, ತೆರಕಣಾಂಬಿ ರಸ್ತೆಯಲ್ಲಿ ಅಭಿಷೇಕ್ ಎಂಬುವವರಿಂದ ದಾಖಲೆ ಇಲ್ಲದ ಹಣವನ್ನು ಫ್ಲೈಯಿಂಗ್ ಸ್ಕ್ಯಾಡ್  ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಗುಂಡ್ಲುಪೇಟೆ–ತೆರಕಣಾಂಬಿ ರಸ್ತೆಯಲ್ಲಿ ಸಿದ್ದರಾಜು ಎಂಬುವವರಿಂದ ₹ 98,890 ಮೊತ್ತವನ್ನು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 70 ಸಾವಿರ ಹಣವನ್ನು ಗುಂಡ್ಲುಪೇಟೆ ಪಟ್ಟಣ ಶಿವಾನಂದ ವೃತ್ತದ ಬಳಿ ಸಂಪತ್‌ ರಾಜ್‌ ಎಂಬುವವರಿಂದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !