ರಕ್ತಕರಣೆ: ಕಾಳಜಿ ಅವಶ್ಯ

ಮಂಗಳವಾರ, ಜೂಲೈ 23, 2019
26 °C

ರಕ್ತಕರಣೆ: ಕಾಳಜಿ ಅವಶ್ಯ

Published:
Updated:

ಗುಲ್ಬರ್ಗ: ಮಿದುಳಿನೊಳಗಿನ ಮಲಿನ ರಕ್ತನಾಳಗಳಲ್ಲಿ ಉಂಟಾಗುವ ತಡೆಯಿಂದ ರಕ್ತಕರಣೆಯ (ಹೆಪ್ಪುಗಟ್ಟುವಿಕೆ) ತೊಂದರೆ ಉದ್ಭವಿಸುತ್ತದೆ. ಈ ರೋಗ ಯಾವುದೇ ವಯೋಮಾನದ ವ್ಯಕ್ತಿಯಲ್ಲಿ ಕಾಣಬಹುದಾದರೂ ಯುವಕರು ಹಾಗೂ ಮತ್ತು ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನರರೋಗ ತಜ್ಞೆ ಡಾ. ಸರೋಜಾ ಅರಳಿಕಟ್ಟೆ ಹೇಳಿದರು.ಡಾ. ಪಿ.ಎಸ್. ಶಂಕರ ಪ್ರತಿಷ್ಠಾನವು ಬುಧವಾರ ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಡಾ. ಜಿ.ವಿ. ಸಾಂಬ್ರಾಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ಮಿದುಳು ಶಿರೆ(ರಕ್ತನಾಳ)ಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ~ ಕುರಿತು ಮಾತನಾಡಿದರು.ಅನೈರ್ಮಲ್ಯ ವಾತಾವರಣದಲ್ಲಿ ಹೆರಿಗೆ, ಹೆರಿಗೆಯಾದ ಬಳಿಕ ಕುಡಿಯಲು ನೀರನ್ನು ಕೊಡದೇ ಇರುವುದು ಹಾಗೂ ರಕ್ತದ ಕೊರತೆಯಿಂದಾಗಿ ಈ ರೋಗ ಸ್ತ್ರೀಯರಲ್ಲಿ ವಿಶೇಷವಾಗಿ ಗೋಚರಿಸುತ್ತದೆ. ವಿಪರೀತ ಮದ್ಯ ಸೇವನೆ ಮತ್ತು ಗುಟ್ಕಾ ಸೇವನೆ ಕೂಡ ಮಿದುಳ ಶಿರೆಗಳಲ್ಲಿ ರಕ್ತಹೆಪ್ಪುವಿಕೆಯನ್ನು ಹೆಚ್ಚಿಸುತ್ತದೆ.ರಕ್ತ ಹೆಪ್ಪುಗಟ್ಟುವಿಕೆ ಪ್ರತಿರೋಧಿಸುವ ಔಷಧಿ ಮತ್ತು ಇತರ ಚಿಕಿತ್ಸೆಗಳನ್ನು ಆದಷ್ಟು ಶೀಘ್ರವೇ ಆರಂಭಿಸಿದರೆ ರೋಗಿಗಳು ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಡಾ. ಸರೋಜಾ ಹೇಳಿದರು.

ಎಚ್‌ಕೆಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು.ಎಂ.ಆರ್. ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಡಾ. ಪ್ರತಿಮಾ ಸಾಂಬ್ರಾಣಿ ಸ್ವಾಗತಿಸಿದರು. ಡಾ. ಎಸ್.ಎಸ್.ಪಾಟೀಲ ವಂದಿಸಿದರು. ಡಾ. ಕುಮಾರ ಅಂಗಡಿ ನಿರೂಪಿಸಿದರು. ವೈದ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry