ಶುಕ್ರವಾರ, ನವೆಂಬರ್ 15, 2019
21 °C

ಚಿಂಚೋಳಿ: ವಲ್ಯ್‌ಪುರ ಬೆಂಬಲಿಗರ ಸಂಭ್ರಮ

Published:
Updated:

ಚಿಂಚೋಳಿ:  ಶಾಸಕ ಸುನೀಲ                ವಲ್ಯ್‌ಪುರ ಅವರು ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.ತಮ್ಮ ಕ್ಷೇತ್ರದ ಶಾಸಕರು ಸಚಿವರಾಗುವುದನ್ನು ಎದುರು ನೋಡುತ್ತಿದ್ದ ಕಾರ್ಯಕರ್ತರು, ಗುರುವಾರ ಮಧ್ಯಾಹ್ನ ಚಿಂಚೋಳಿ, ಚಂದಾಪುರ ಹಾಗೂ ಕಲ್ಲೂರು ರೋಡ್, ಚಿಮ್ಮನಚೋಡ್, ಐನೋಳ್ಳಿ ಮತ್ತಿತರ ಕಡೆಗಳಲ್ಲಿ ಪಟಾಕಿಗಳನ್ನು ಸಿಡಿಸಿ ಹರ್ಷ           ವ್ಯಕ್ತಪಡಿಸಿದರು.ಪಟ್ಟಣದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಕ್ಷದ ಹಿರಿಯ ಮುಖಂಡ ಭೀಮಶೆಟ್ಟಿ ಮುಕ್ಕಾ, ಪಟ್ಟಣ                ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ                ಗುತ್ತೇದಾರ್, ಮಾಜಿ ಉಪಾಧ್ಯಕ್ಷ ಗುಂಡಯ್ಯ ಸ್ವಾಮಿ, ರವಿಕುಮಾರ ಜೊನ್ನಲ್, ವಕೀಲ ನಾಗಭೂಷಣ ಹುಲಗುಂಡಿ, ಶಶಿಕಾಂತ ಆಡಕಿ, ಭೀಮಾಶಂಕರ ಕಳಸ್ಕರ್, ಹೈಕ ಹೋರಾಟ ಸಮಿತಿ ಮುಖಂಡ ಮಧೂಸೂದನ್ ಪರೀಟ್, ಮಹೇಶ ದಾದಾಪುರ, ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಪ್ರದೀಪ ಮೇತ್ರಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)