ಕೆಲವೊಮ್ಮೆ ಅನಾರೋಗ್ಯ ಸಮಸ್ಯೆಗಳು ಅಸಹನೀಯ ಎನ್ನಿಸುವಷ್ಟು ಕಾಡುತ್ತವೆ. ಅಂತಹ ಸಮಸ್ಯೆಗಳಲ್ಲಿ ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಕೂಡ ಒಂದು. ಬಾಯಿಯ ಒಳಗೆ ಸಣ್ಣ ಗುಳ್ಳೆಯಂತೆ ಕಾಣಿಸಿಕೊಂಡು ನಂತರ ಹುಣ್ಣಿನಂತಾಗುವ ಇದು ನೀರು ಕುಡಿಯಲೂ ಕಷ್ಟವಾಗುವಂತೆ ಮಾಡಿಬಿಡುತ್ತದೆ. ಹವಾಮಾನದಲ್ಲಿನ ವ್ಯತ್ಯಾಸ, ದೇಹದಲ್ಲಿನ ಬದಲಾವಣೆ, ಆಹಾರ ಸೇವನೆಯಲ್ಲಿ ವ್ಯತ್ಯಾಸವೂ ಬಾಯಿಹುಣ್ಣಾಗುವಂತೆ ಮಾಡಿಬಿಡುತ್ತದೆ.

ಬಾಯಿ ಹುಣ್ಣಾಗಲು ಕಾರಣ, ಪರಿಹಾರದ ಬಗ್ಗೆ ತಜ್ಞ ವೈದ್ಯರು ‘ಪ್ರಜಾವಾಣಿ ಡಿಜಿಟಲ್’ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಫ್ಯಾಮಿಲಿ ಫಿಸಿಶಿಯನ್ ಡಾ. ಸುದರ್ಶನ್ ಮಾತನಾಡಿ, ‘ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ದೇಹ ಒಣಗುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚು ಮಸಾಲೆಯುಕ್ತ ಮತ್ತು ಬಿಸಿಯ ಆಹಾರ ಸೇವಿಸುತ್ತೇವೆ. ಹೀಟರ್ಗಳನ್ನು ಹೆಚ್ಚು ಬಳಸುತ್ತೇವೆ. ಇದು ಇನ್ನಷ್ಟು ದೇಹವನ್ನು ಒಣಗಿಸುತ್ತದೆ. ಆಮ್ಲೀಯ ಆಹಾರ ಸೇವನೆಯಿಂದಾಗಿ ದೇಹಕ್ಕೆ ಪೌಷ್ಟಿಕಾಂಶ ಮತ್ತು ತೈಲದ ಅಂಶ (ವಿಟಮಿನ್ ಬಿ12, ಕಬ್ಬಿಣ) ಕೊರತೆಯಾಗಿ ಬಾಯಿ ಒಣಗಿ, ಬಿರಿಯಲು ಕಾರಣವಾಗುತ್ತದೆ.

ಚಳಿಗಾಲದಲ್ಲಿ ಬಾಯಿ ಹುಣ್ಣು ಆಗಲು ಕಾರಣಗಳು

ಚಳಿಗಾಲದಲ್ಲಿ ಒಳಾಂಗಣ ತಾಪವನ್ನು ಕಡಿಮೆ ಮಾಡುವ ವ್ಯವಸ್ಥೆಗಳಿಂದ ಬಾಯಿಯ ತೇವಾಂಶ ಕಡಿಮೆಯಾಗುತ್ತದೆ. ಲಾಲಾರಸದ ಕೊರತೆಯು ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ಸೃಷ್ಟಿಸಿ ಹುಣ್ಣುಗಳನ್ನು ಉಂಟುಮಾಡಬಹುದು.

ಇದಲ್ಲದೇ ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ಸಹಜವಾಗಿ ಕುಸಿಯುತ್ತದೆ. ಇದರಿಂದ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು ಸುಲಭವಾಗಿ ಬರುತ್ತವೆ.

ವಿಟಮಿನ್ ಬಿ12, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶಗಳ ಕೊರತೆ ಬಾಯಿ ಹುಣ್ಣುಗಳಿಗೆ ಸಾಮಾನ್ಯ ಕಾರಣವಾಗಿದೆ.

ಬಿಸಿ, ಮಸಾಲೆಯುಕ್ತ, ಹುಳಿ ಮತ್ತು ಆಮ್ಲೀಯ ಆಹಾರಗಳು (ಸಿಟ್ರಸ್ ಹಣ್ಣುಗಳು) ಲೋಳೆಯ ಪೊರೆಯನ್ನು ಕೆರಳಿಸಬಹುದು.

ಭಾವನಾತ್ಮಕ ಒತ್ತಡ ಮತ್ತು ಹಾರ್ಮೋನ್ ಏರಿಳಿತಗಳು ಸಹ ಹುಣ್ಣುಗಳನ್ನು ಪ್ರಚೋದಿಸಬಹುದು.

ಚಳಿಯ ವಾತಾವರಣದಲ್ಲಿ ಬಾಯಿಯ ಸೂಕ್ಷ್ಮ ಚರ್ಮದ ಪದರಗಳಿಗೆ ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಷ್ ತಾಗುವುದು ಅಥವಾ ಚೂಪಾದ ಹಲ್ಲುಗಳು/ದಂತ ಉಪಕರಣಗಳು ಗಾಯಗೊಳಿಸುತ್ತವೆ. ಇದರಿಂದಾಗಿಯೂ ಬಾಯಿ ಹುಣ್ಣು ಉಂಟಾಗಬಹುದು.

ಚಳಿಗಾಲದಲ್ಲಿ ಹೆಚ್ಚು ಬಳಕೆಯಾಗುವ ಕೆಲವು ನೋವು ನಿವಾರಕಗಳು ಮತ್ತು ಅಲರ್ಜಿ ಉಂಟು ಮಾಡುವ ಔಷಧಗಳ ಸೇವನೆಯಿಂದ ಬಾಯಿ ಹುಣ್ಣಿಗೆ ಕಾರಣವಾಗಬಹುದು.

ಪರಿಹಾರ ಮತ್ತು ತಡೆಗಟ್ಟುವಿಕೆ:

ಪ್ರತಿದಿನ 3–4 ಲೀಟರ್ ನೀರು ಕುಡಿಯಿರಿ

ನಿಯಮಿತವಾಗಿ ರಾತ್ರಿ ಹಾಗೂ ಬೆಳಿಗ್ಗೆ ಹಲ್ಲುಜ್ಜುವುದು ಮತ್ತು ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ

ಪೋಷಕಾಂಶಯುಕ್ತ ಆಹಾರ ಸೇವನೆ

ಮಸಾಲೆಯುಕ್ತ ಮತ್ತು ಆಮ್ಲೀಯ ಆಹಾರಗಳನ್ನು ಕಡಿಮೆ ಮಾಡಿ

ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ

ಅನಾರೋಗ್ಯದ ಸಣ್ಣ ಲಕ್ಷಣಗಳನ್ನೂ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಬಾಯಿ ಹುಣ್ಣಿಗೆ ಸಂಬಂಧಿಸಿದಂತೆ ಆಯುರ್ವೇದ ತಜ್ಞರ ಕೆಲವು ಸಲಹೆಗಳು ಇಲ್ಲಿವೆ

ಆಯುರ್ವೇದದ ಮೂಲಕವೂ ಬಾಯಿ ಹುಣ್ಣನ್ನು ನಿವಾರಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಜೀವೋತ್ತಮ ಹೆಲ್ತ್ ಕ್ಲಿನಿಕ್ನ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಬಾಯಿಯ ಹುಣ್ಣಿನ ಲಕ್ಷಣಗಳು

ಬಾಯಿ ಒಳಗೆ ಗುಳ್ಳೆ ಆಗುವುದು

ಆಹಾರ ಸೇವಿಸುವಾಗ ಉರಿ

ಬಾಯಿಯಲ್ಲಿ ಚರ್ಮ ಏಳುವುದು

ಬಾಯಿ ಹುಣ್ಣಿಗೆ ಕಾರಣಗಳು

ಆಹಾರ ಸೇವಿಸುವಾಗ ದವಡೆಯನ್ನು ಕಚ್ಚಿಕೊಂಡು ಗಾಯವಾದರೆ

ಪದೇ ಪದೇ ನಾನಾ ವಿದಧ ಪೇಸ್ಟ್ ಬಳಕೆ

ಧೂಮಪಾನ, ಮದ್ಯಪಾನ ಮಾಡುವುದು

ವಿಟಮಿನ್ ಸಿ, ಡಿ, ಬಿ ಕಡಿಮೆ ಆದಾಗ

ಅತಿಯಾದ ಖಾರವಾಗಿರುವ ಆಹಾರ ಸೇವನೆ

ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಬದಲಾವಣೆ

ಎಲೆ ಅಡಿಕೆ ಸೇವನೆ

ರೋಧ ನಿರೋಧಕ ಶಕ್ತಿ ಕಡಿಮೆ ಆದಾಗ ಬಾಯಲ್ಲಿ ಹುಣ್ಣು ಆಗುವ ಸಾಧ್ಯತೆ ಇರುತ್ತದೆ.

ಆಯುರ್ವೇದದಲ್ಲಿನ ಪರಿಹಾರ

ನೆಲ್ಲಿಕಾಯಿ ಪುಡಿ ಜೊತೆ ಜೇನುತುಪ್ಪ ಮಿಶ್ರಣ ಮಾಡಿ ಸೇವನೆ ಮಾಡಬೇಕು

ಜೇನುತುಪ್ಪವನ್ನು ಮಾತ್ರ ಬಾಯಲ್ಲಿ 5 ರಿಂದ10 ನಿಮಿಷ ಇಟ್ಟುಕೊಳ್ಳಬೇಕು

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಸೋಡ, ಉಪ್ಪು ಮಿಶ್ರಣ ಮಾಡಿ ಗಾರ್ಗಲ್ ಮಾಡಬೇಕು

ದಿನಕ್ಕೆ 3–4 ಲೀಟರ್ ನೀರು ಸೇವನೆ ಮಾಡಬೇಕು

ವಿಟಮಿನ್ ಬಿ, ಸಿ, ಆಹಾರಗಳನ್ನು ಸೇವನೆ ಮಾಡವುದರಿಂದ ಬಾಯಿ ಹುಣ್ಣು ನಿಯಂತ್ರಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.