ಕರಜಗಿ: ಅರೆಬೆಂದ ಬಿಸಿಯೂಟ ಮಕ್ಕಳಿಂದ ಪ್ರತಿಭಟನೆ

7

ಕರಜಗಿ: ಅರೆಬೆಂದ ಬಿಸಿಯೂಟ ಮಕ್ಕಳಿಂದ ಪ್ರತಿಭಟನೆ

Published:
Updated:
ಕರಜಗಿ: ಅರೆಬೆಂದ ಬಿಸಿಯೂಟ ಮಕ್ಕಳಿಂದ ಪ್ರತಿಭಟನೆ

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ಅರೆ-ಬರೆ ಬೇಯಿಸಿದ್ದರಿಂದ ಮಕ್ಕಳು ಊಟ ಮಾಡದೇ ದಿಢೀರ್ ಪ್ರತಿಭಟನೆ ನಡೆಸಿದರು.ಶಾಲೆಯಲ್ಲಿ ಸುಮಾರು 900 ಮಕ್ಕಳು ವ್ಯಾಸಂಗ ಮಾಡುತ್ತಾರೆ. ದಿನಾಲೂ ಮಕ್ಕಳಿಗೆ ಬಿಸಿಯೂಟ ಸರಿಯಾಗಿ ಬೇಯಿಸಿ  ಹಾಕುವುದಿಲ್ಲ. ತಾಲ್ಲೂಕು ಬಿಸಿಯೂಟ ಅಧಿಕಾರಿ ಅಂಬರೀಷ ಕಾಂಬಳೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ಗುರುವಾರ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಅಡುಗೆ ಮಾಡುವವರಿಗೆ ತಾಕೀತು ಮಾಡಿ ಹೋಗಿದ್ದರು. ಮರುದಿನವೇ ಮಕ್ಕಳಿಗೆ ಅರೆ-ಬರೆ ಬೇಯಿಸಿದ ಅನ್ನ ಹಾಕಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಂಬಣ್ಣ ನರಗೊದಿ ಆರೋಪಿಸಿದರು.ಒತ್ತಾಯ:
ಮೇಲಧಿಕಾರಿಗಳು ಶನಿವಾರ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲನೆ ಮಾಡಿ ಅಡುಗೆ ಮಾಡುವವರನ್ನು ಬದಲಾವಣೆ ಮಾಡಬೇಕು. ಮುಖ್ಯೋಪಾಧ್ಯಾಯನಿ ವರ್ಗಾವಣೆ ಮಾಡಬೇಕೆಂದು ಪಾಲಕರಾದ ಭೀಮಾ ನಾಯಿಕೊಡಿ, ತುಕಾರಾಮ ಕಾಮಕೆರಿ, ಸಿದ್ಧರಾಮ ಹಾಗೂ ಗಂಗಪ್ಪ ಖೇಡ ಅಲ್ಲದೆ ಎಸ್‌ಡಿಎಂಸಿ ಅಧ್ಯಕ್ಷ ಅಂಬಣ್ಣ ನರಗೊದಿ ಅವರು ಒತ್ತಾಯಿಸಿದ್ದಾರೆ.ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಸೋಮವಾರ ಶಾಲೆಗೆ ಬೀಗ ಹಾಕಿ ಮಕ್ಕಳೊಂದಿಗೆ  ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry