ನೀವು ಒಂದು ಅಂಗಡಿಗೆ ಹೋದಾಗ, ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳೂ ಇದ್ದಕ್ಕಿದ್ದಂತೆ ಕಡಿಮೆ ಬೆಲೆಗೆ ಲಭಿಸುವುದನ್ನು ಊಹಿಸಿಕೊಳ್ಳಿ. ಭಾರತದ ಪಾಲಿಗೂ ಈಗ ಅಂತಹದ್ದೇ ಪ್ರಯೋಜನವಾಗಿದ್ದು, ಆದರೆ ಈ ಬಾರಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಲಭಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತಾನು 'ಮದರ್ ಆಫ್ ಆಲ್ ಡೀಲ್ಸ್' (ಎಲ್ಲ ಒಪ್ಪಂದಗಳ ತಾಯಿ) ಎನ್ನುವ, ಐರೋಪ್ಯ ಒಕ್ಕೂಟದ ಜೊತೆಗಿನ ಬಹುದೊಡ್ಡ ಮುಕ್ತ ವ್ಯಾಪಾರ ಒಪ್ಪಂದವನ್ನು ಘೋಷಿಸಿದರು. ಅಂದಿನಿಂದ ಈ ಒಪ್ಪಂದ ಜಾಗತಿಕವಾಗಿ ಸುದ್ದಿಯಾಗತೊಡಗಿತು. ಆದರೆ, ಈ ಒಪ್ಪಂದಕ್ಕೆ ಏಕೆ ಇದ್ದಕ್ಕಿದ್ದಂತೆ ಇಷ್ಟು ಮಹತ್ವ ಲಭಿಸಿದೆ? ಅದರಲ್ಲೂ ಅಮೆರಿಕ ಎಲ್ಲರಿಗೂ ವ್ಯಾಪಾರ ಅಡೆತಡೆಗಳನ್ನು ಸೃಷ್ಟಿಸಿ, ಸಮಸ್ಯೆ ನಿರ್ಮಿಸಿರುವಾಗ ಈ ಒಪ್ಪಂದ ಏಕೆ ಗಮನ ಸೆಳೆಯುತ್ತಿದೆ?

ಇದನ್ನು ಸರಳವಾಗಿ ಗಮನಿಸೋಣ. ಬಹಳಷ್ಟು ವರ್ಷಗಳ ಕಾಲ, ಯಾವುದಾದರೂ ಯುರೋಪಿಯನ್ ಕಂಪನಿ ಭಾರತದಲ್ಲಿ ತನ್ನ ಕಾರನ್ನು ಮಾರಾಟ ನಡೆಸಬೇಕಾದರೆ ಬರೋಬ್ಬರಿ 70% ಆಮದು ಸುಂಕವನ್ನು ತೆರಬೇಕಾಗುತ್ತಿತ್ತು. ಅಂದರೆ, ಇದು ಹತ್ತು ಲಕ್ಷ ರೂಪಾಯಿಗಳ ಕಾರನ್ನು ಖರೀದಿಸಲು ಅದಕ್ಕೆ ಏಳು ಲಕ್ಷ ರೂಪಾಯಿಗಳ ಹೆಚ್ಚುವರಿ ಆಮದು ಸುಂಕ ತೆರುವಂತಾಗುತ್ತಿತ್ತು! ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ, ಈ ತೆರಿಗೆ ಕೇವಲ 10%ಗೆ ಇಳಿಯಲಿದೆ. ಇದ್ದಕ್ಕಿದ್ದಂತೆ ಐಷಾರಾಮಿ ಕಾರುಗಳು ಬಹಳಷ್ಟು ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಲಭಿಸುವಂತಾಗಿದೆ. ಆದರೆ, ಈ ಒಪ್ಪಂದ ಕೇವಲ ಕಾರುಗಳಿಗೆ ಸೀಮಿತವಾದುದಲ್ಲ. ವೈನ್ನಿಂದ ಆಲಿವ್ ಎಣ್ಣೆಯ ತನಕ, ಔಷಧಿ ಉಪಕರಣಗಳಿಂದ ಯಂತ್ರೋಪಕರಣಗಳ ತನಕ, 90%ಕ್ಕೂ ಹೆಚ್ಚು ಯುರೋಪಿಯನ್ ಉತ್ಪನ್ನಗಳು ಭಾರತಕ್ಕೆ ಬರುವಾಗ ಒಂದೋ ಆಮದು ತೆರಿಗೆಯೇ ಇರುವುದಿಲ್ಲ, ಅಥವಾ ಇದ್ದರೂ ಕನಿಷ್ಠ ಪ್ರಮಾಣದಲ್ಲಿರುತ್ತದೆ.

ಈ ಒಪ್ಪಂದದ ಪ್ರಮಾಣವೇ ಅತ್ಯಂತ ಬೃಹತ್ತಾಗಿದೆ. ಈ ಒಪ್ಪಂದದ ಪರಿಣಾಮವಾಗಿ, ಭಾರತಕ್ಕೆ ತನ್ನ ರಫ್ತು ದುಪ್ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಐರೋಪ್ಯ ಒಕ್ಕೂಟ ಭಾವಿಸಿದೆ. ಇದರಿಂದ ಆಮದು ತೆರಿಗೆಯ ಪಾವತಿ ಕಡಿಮೆಯಾಗಿ, ಪ್ರತಿ ವರ್ಷವೂ ಬಹುತೇಕ 4 ಬಿಲಿಯನ್ ಯೂರೋಗಳ ಉಳಿತಾಯವಾಗಬಹುದು ಎನ್ನಲಾಗಿದೆ. ಅಂದರೆ, ಇದು ವಾರ್ಷಿಕವಾಗಿ ಬಹುತೇಕ 4.36 ಲಕ್ಷ ಕೋಟಿ ರೂಪಾಯಿಯ ಉಳಿತಾಯವಾಗಲಿದೆ! ಈಗಿನ ವ್ಯಾಪಾರದ ಪ್ರಮಾಣವೇನು? ಭಾರತ ಮತ್ತು ಐರೋಪ್ಯ ಒಕ್ಕೂಟಗಳು ಈಗಾಗಲೇ ವಾರ್ಷಿಕವಾಗಿ 190 ಬಿಲಿಯನ್ ಡಾಲರ್ ವ್ಯಾಪಾರ ನಡೆಸುತ್ತಿವೆ. ಇದು ಬಹುತೇಕ ₹17 ಲಕ್ಷ ಕೋಟಿ ಆಗಲಿದೆ! ಭಾರತ ಪ್ರಸ್ತುತ ಯುರೋಪಿಗೆ 75.9 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ಮತ್ತು 30 ಬಿಲಿಯನ್ ಡಾಲರ್ ಮೌಲ್ಯದ ಸೇವೆಗಳನ್ನು ರಫ್ತು ಮಾಡುತ್ತಿದೆ. ಇದೇ ವೇಳೆ, ಯುರೋಪ್ ಭಾರತಕ್ಕೆ 60.7 ಬಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು 23 ಬಿಲಿಯನ್ ಡಾಲರ್ ಮೌಲ್ಯದ ಸೇವೆಗಳನ್ನು ರಫ್ತು ಮಾಡುತ್ತಿದೆ. ಆದರೆ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ನೂತನ ಒಪ್ಪಂದ ಈ ಮೊತ್ತದಲ್ಲಿ ಅಸಾಧಾರಣ ಹೆಚ್ಚಳ ತರುವ ನಿರೀಕ್ಷೆಗಳಿದ್ದು, 2032ರ ವೇಳೆಗೆ ಭಾರತಕ್ಕೆ ಯುರೋಪಿನ ರಫ್ತು ದುಪ್ಪಟ್ಟು ಪ್ರಮಾಣ ತಲುಪಲಿದೆ.

ಅಮೆರಿಕದ ವ್ಯಾಪಾರ ನಿಲುವನ್ನು ಗಮನಿಸಿದಾಗ, ಈ ಒಪ್ಪಂದ ನಿಜಕ್ಕೂ ಆಸಕ್ತಿಕರವಾಗಿ ಪರಿಣಮಿಸಿದೆ. ಅಮೆರಿಕ ವ್ಯಾಪಾರಕ್ಕೆ ಎಲ್ಲೆಡೆಯೂ ಅಡ್ಡ ಗೋಡೆಗಳನ್ನು ನಿರ್ಮಿಸಿದ್ದು, ಎಲ್ಲ ದೇಶಗಳಿಗೂ ಮುಕ್ತ ವ್ಯಾಪಾರ ನಡೆಸುವುದು ಕಷ್ಟಕರವಾಗಿದೆ. ಆದರೆ, ಭಾರತ ನಡೆಸಿರುವ ಒಪ್ಪಂದ ಏಕಕಾಲಕ್ಕೇ 27 ಯುರೋಪಿಯನ್ ದೇಶಗಳಿಗೆ ವ್ಯಾಪಾರದ ಹಾದಿ ತೆರೆದಿದೆ. ಈ ಒಪ್ಪಂದ ಜಾಗತಿಕ ಆರ್ಥಿಕತೆಯ 25% ಆರ್ಥಿಕತೆಯನ್ನು ವ್ಯಾಪಿಸಿದ್ದು, ಜಗತ್ತಿನ ಒಟ್ಟು ವ್ಯಾಪಾರದ ಬಹುತೇಕ ಮೂರನೇ ಒಂದು ಪಾಲು ಹೊಂದಿದೆ. ಇಷ್ಟು ಬೃಹತ್ ಪ್ರಮಾಣದ ಸಂಖ್ಯೆಯ ವ್ಯಾಪಾರ ನಡೆಸುವಾಗ, ಭಾರತ - ಇಯು ನಡುವಿನ ಒಪ್ಪಂದ ಕೇವಲ ಒಂದು ಒಪ್ಪಂದ ಮಾತ್ರವಲ್ಲ. ಇದು ಜಗತ್ತು ವ್ಯಾಪಾರ ವ್ಯವಹಾರ ಮಾಡುವ ವಿಧಾನವನ್ನೇ ಮರು ರೂಪಿಸಿದಂತಾಗಿದೆ.

ಆದರೆ, ಸಾಮಾನ್ಯ ಭಾರತೀಯ ಕುಟುಂಬಗಳು ಯಾಕೆ ಈ ಒಪ್ಪಂದದ ಕುರಿತು ಆಲೋಚಿಸಬೇಕು? ಈ ಒಪ್ಪಂದದ ಪರಿಣಾಮವಾಗಿ, ಆಮದು ತೆರಿಗೆ ಬಹುತೇಕ ಶೂನ್ಯಕ್ಕೆ ಇಳಿಯುವುದರಿಂದ, ಭಾರತದ ಆಸ್ಪತ್ರೆಗಳು ಮತ್ತು ರೋಗ ನಿರ್ಣಯ ಕೇಂದ್ರಗಳಿಗೆ (ಡಯಾಗ್ನಾಸಿಸ್ ಸೆಂಟರ್) ಬಹಳ ಕಡಿಮೆ ಬೆಲೆಗೆ ಐರೋಪ್ಯ ವೈದ್ಯಕೀಯ ಉಪಕರಣಗಳು ಲಭಿಸುತ್ತವೆ. ಬಹುತೇಕ 90% ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲಿನ ಸುಂಕ ಶೂನ್ಯವಾಗಲಿದೆ. ದುಬಾರಿ ಎಂಆರ್ಐ ಸ್ಕ್ಯಾನ್ ಅಥವಾ ಅವಶ್ಯಕ ಶಸ್ತ್ರಚಿಕಿತ್ಸೆಗಳು ಈಗ ಹೆಚ್ಚು ಕೈಗೆಟುಕುವ ದರದಲ್ಲಿ ಲಭಿಸುತ್ತವೆ. ನಿಮ್ಮ ಸ್ಥಳೀಯ ಮೆಕ್ಯಾನಿಕ್ ಅತಿಹೆಚ್ಚಿನ 44% ಆಮದು ಸುಂಕ ಪಾವತಿಸದೆಯೇ ಉತ್ತಮ ಯಂತ್ರೋಪಕರಣಗಳನ್ನು ಪಡೆಯಬಹುದು. ಬಹುತೇಕ 22% ಸುಂಕ ಹೊಂದಿರುವ ರಾಸಾಯನಿಕಗಳು ಮತ್ತು 11% ಸುಂಕ ಹೊಂದಿರುವ ಔಷಧ ಉಪಕರಣಗಳ ಮೇಲಿನ ಸುಂಕ ಬಹುತೇಕ ಶೂನ್ಯಕ್ಕೆ ಇಳಿಯಲಿದೆ. ಇನ್ನು ಯುರೋಪಿಯನ್ ವೈನಿನ ಮೇಲಿನ ತೆರಿಗೆ ಬಹುತೇಕ 20-30%ಕ್ಕೆ, ಸ್ಪಿರಿಟ್ ಮೇಲಿನ ತೆರಿಗೆ 40%ಕ್ಕೆ, ಮತ್ತು ಬಿಯರ್ ಮೇಲಿನ ಸುಂಕ 50%ಕ್ಕೆ ಇಳಿಯುವುದರಿಂದ, ನಿಮ್ಮ ನೆರೆಯ ರೆಸ್ಟೋರೆಂಟ್ಗಳು ಕಡಿಮೆ ಬೆಲೆಗೆ ಮದ್ಯ ಪೂರೈಸಬಹುದು.

ಆದರೆ, ಯುರೋಪಿಯನ್ ಉತ್ಪನ್ನಗಳು ಕಡಿಮೆ ಬೆಲೆಗೆ ಲಭಿಸುವುದರಿಂದ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಹಲವರು ಪ್ರಶ್ನೆ ಮಾಡಬಹುದು. ಇದು ನಿಜಕ್ಕೂ ಸಹಜವಾದ ಕಾಳಜಿಯಾಗಿದ್ದು, ಆಟೋಮೊಬೈಲ್, ಯಂತ್ರೋಪಕರಣಗಳು, ಮತ್ತು ರಾಸಾಯನಿಕಗಳ ಮಾರಾಟ ಮಾಡುವ ಕಂಪನಿಗಳಿಗೆ ಹೆಚ್ಚಿನ ಸ್ಪರ್ಧೆ ಎದುರಾಗಲಿದೆ. ಆದರೆ, ಇದನ್ನು 'ಮದರ್ ಆಫ್ ಆಲ್ ಡೀಲ್ಸ್' ಆಗಿಸುವ ಇನ್ನೊಂದು ವಿಚಾರವೂ ಇದೆ. ಯುರೋಪಿಯನ್ ಉತ್ಪನ್ನಗಳು ಭಾರತದಲ್ಲಿ ಅಗ್ಗವಾಗುವ ರೀತಿಯಲ್ಲೇ, ಯುರೋಪಿನಲ್ಲೂ ಭಾರತೀಯ ಉತ್ಪನ್ನಗಳು ಕಡಿಮೆ ಬೆಲೆಗೆ ಲಭಿಸಲಿವೆ. ವಲಸೆ ನೀತಿಗಳು ಮತ್ತು ಸಂಚಾರ ನೀತಿಗಳು ಸರಳವಾಗುವುದರಿಂದ, ಭಾರತೀಯ ಇಂಜಿನಿಯರ್ಗಳು ಇನ್ನಷ್ಟು ಸುಲಭವಾಗಿ ಯುರೋಪಿಯನ್ ಕಂಪನಿಗಳಲ್ಲಿ ಕಾರ್ಯಾಚರಿಸಬಹುದು. ನಮ್ಮ ಐಟಿ ಸಂಸ್ಥೆಗಳು, ವಸ್ತ್ರ ಉದ್ಯಮಗಳು, ಮತ್ತು ಔಷಧ ಕಂಪನಿಗಳು ಹೆಚ್ಚು ಖರೀದಿ ಸಾಮರ್ಥ್ಯ ಹೊಂದಿರುವ ಬಹುತೇಕ 450 ಮಿಲಿಯನ್ ಯುರೋಪಿಯನ್ ಗ್ರಾಹಕರಿಗೆ ಸುಲಭವಾಗಿ ತಲುಪಲು ಸಾಧ್ಯವಾಗಲಿದೆ.

ಯುರೋಪಿಯನ್ ಒಕ್ಕೂಟ ಭಾರತಕ್ಕೆ ಹವಾಮಾನ ಬದಲಾವಣೆಯ ವಿರುದ್ಧ ಸೆಣಸಲು 500 ಮಿಲಿಯನ್ ಯೂರೋ ಒದಗಿಸಲಿದೆ. ಅಂದರೆ, 4,500 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಸ್ವಚ್ಛ ಇಂಧನ, ಮಾಲಿನ್ಯ ನಿಯಂತ್ರಣ, ವಾತಾವರಣದ ರಕ್ಷಣೆಗೆ ಮೀಸಲಿಡಲಾಗಿದೆ. ಈ ಒಪ್ಪಂದ ಮಾಡಿಕೊಂಡಿರುವ ಸಮಯವೂ ಬಹಳ ಗಮನಾರ್ಹವಾಗಿದೆ. ಅಮೆರಿಕ ಹೆಚ್ಚಿನ ವ್ಯಾಪಾರ ನಿರ್ಬಂಧಗಳನ್ನು ಸೃಷ್ಟಿಸಿರುವಾಗ, ಭಾರತ ಇತರರಂತೆ ದೂರು ಹೇಳುತ್ತಾ ಕುಳಿತಿಲ್ಲ. ಬದಲಿಗೆ, ಹೊಸ ವ್ಯಾಪಾರ ಮಾರ್ಗಗಳನ್ನು ಸೃಷ್ಟಿಸಿರುವ ಭಾರತ, ಬ್ರಿಟನ್ ಜೊತೆ ಒಪ್ಪಂದಗಳಿಗೆ, ಮತ್ತು ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ ಜೊತೆಗೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈಗ ಭಾರತ ಸಹಯೋಗಿಗಳ ಜಾಲವನ್ನು ಸೃಷ್ಟಿಸುತ್ತಿದೆ. ಇದು ಒಂದು ರೀತಿ ಯಾರೋ ಒಬ್ಬನ ಮೇಲೆ ಅವಲಂಬಿತವಾಗುವ ಬದಲು, ಹಲವು ಸ್ನೇಹಿತರನ್ನು ಹೊಂದುವಂತಿರಲಿದೆ.

140 ಕೋಟಿ ಭಾರತೀಯರಿಗೆ ಮತ್ತು ಕೋಟ್ಯಂತರ ಯುರೋಪಿಯನ್ ನಾಗರಿಕರಿಗೆ ಈ ಒಪ್ಪಂದ ನೈಜ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬೆಂಗಳೂರಿನಲ್ಲಿರುವ ಓರ್ವ ಯುವ ಪ್ರೋಗ್ರಾಮರ್ಗೆ ಸುಲಭವಾಗಿ ಜರ್ಮನ್ ಕಂಪನಿಯೊಡನೆ ಕೆಲಸ ಮಾಡಬಹುದು. ಮುಂಬೈಯಲ್ಲಿರುವ ವೈದ್ಯರಿಗೆ ಕಡಿಮೆ ಬೆಲೆಗೆ ಆಧುನಿಕ ಉಪಕರಣಗಳು ಲಭಿಸುತ್ತವೆ. ಪಂಜಾಬಿನಲ್ಲಿರುವ ರೈತ ತನ್ನ ಉತ್ಪನ್ನಗಳನ್ನು ನೂತನ ಯುರೋಪಿಯನ್ ಮಾರುಕಟ್ಟೆಗಳಿಗೆ ಮಾರಾಟ ಮಾಡಬಹುದು.

ಈ ಒಪ್ಪಂದವನ್ನು ನಿಜಕ್ಕೂ ಐತಿಹಾಸಿಕವಾಗಿಸುವುದು ಇದು ಸಾಗಿಬಂದ ಹಾದಿ ಮತ್ತು ಒಪ್ಪಂದ ಹೊಂದಿರುವ ದೂರದೃಷ್ಟಿ. 2007ರಲ್ಲಿ ಆರಂಭಗೊಂಡ ಮಾತುಕತೆಗಳು 2013ರಲ್ಲಿ ಕೊನೆಗೊಂಡಿದ್ದವು. ಬಳಿಕ 2022ರಲ್ಲಿ ಪುನರಾರಂಭಗೊಂಡು, ಉಭಯ ಪಕ್ಷಗಳೂ ಅಂತಿಮ ಒಪ್ಪಿಗೆ ಸೂಚಿಸಿದವು. ವ್ಯಾಪಾರ ಅಡೆತಡೆಗಳು ಎಲ್ಲೆಡೆಯೂ ಇರುತ್ತವೆ. ಆದರೆ ಭಾರತ ಒಂದು ಮಾರ್ಗ ಮುಚ್ಚಲ್ಪಟ್ಟಾಗ ನಾವು ಇನ್ನೊಂದು ಕಡೆಯಲ್ಲಿ ಹೆದ್ದಾರಿ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತುಪಡಿಸಿದೆ. ಆದ್ದರಿಂದಲೇ ಇದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಕರೆಯಲಾಗಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.